ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸಲಿರಾಜ್ಯ ಸರ್ಕಾರದ ಸಾಧನೆ, ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಆಗ್ರಹಿಸಿದರು. ಒಬ್ಬೊಬ್ಬರು ಒಂದೊಂದು ದಿನ ಹೀಗೆ ಮಾಡಿ ಜನರ ದಾರಿ ತಪ್ಪಿಸಬಾರದು. ಅವರ ಬಳಿ ಹಣ ಇಲ್ಲ, ಅದನ್ನ ಮರೆಸಲು ಹೀಗೆ ಮಾಡ್ತಾ ಇದಾರೆ, ಇವರು ಹೀಗೆ ಪತ್ರ ಬರೆಯೋದು, ನಾವು ನೀವು ಚರ್ಚೆ ಮಾಡ್ತಾ ಎಲ್ಲವನ್ನೂ ಮರೆಯುವಂತಾಗಿದೆ ಎಂದರು. ಸರ್ಕಾರದವರು ಬಿಜೆಪಿಯನ್ನು ಟೀಕಿಸುತ್ತಿರುವುದಕ್ಕೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.