ಕಾಫಿ ಬೆಳೆಗಾರರು ಸಂಘಟಿತರಾದಾಗ ಸಮಸ್ಯೆಗಳಿಗೆ ಪರಿಹಾರಕಾಫಿ ಬೆಳೆಗಾರರು ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್ ತಿಳಿಸಿದರು. ಕಾಡಾನೆ ಹಾವಳಿ, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ, ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ನಿರಂತರವಾಗಿ ಕಾಡುತ್ತಿದೆ. ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮತ್ತು ರಾಜ್ಯ ಸಂಘಗಳು ನಿರಂತರ ಪ್ರಯತ್ನ ನಡೆಸಿವೆ. ಬೆಳೆಗಾರರು ಸಂಘಟಿತರಾಗಬೇಕು ಹಾಗೂ ಸಂಘದ ಸದಸ್ಯತ್ವ ಪಡೆಯಬೇಕು ಎಂದರು.