ಕಸಾಪ ಸಂಘಟನಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ವೃತ್ತದ ಬಳಿ ಸಂಜೆ ೬ ಗಂಟೆಯ ಸಮಯದಲ್ಲಿ ಅಬ್ದುಲ್‌ಹಕ್, ಅಬ್ದುಲ್ ಹಸನ್, ಫಹಾದ್, ಸಾದಿಕ್, ಶಮಿ, ಸಾಕಿಬ್ ಮತ್ತಿತರ ಸುಮಾರು ೧೦ಕ್ಕೂ ಹೆಚ್ಚು ಜನ ಗೂಂಡಾಗಳು ಏಕಾಏಕಿ ಸುತ್ತುವರೆದು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಬೀಉಲ್ಲಾಬೇಗ್ ಆರೋಪಿಸಿದ್ದಾರೆ.