ವಾಟೇಹೊಳೆ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಆಚರಣೆಆಲೂರು ತಾಲೂಕಿನ ವಾಟೇಹೊಳೆಯಲ್ಲಿರುವ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ರಿಸ್‌ಮಸ್ ಎಂಬುದು ಸೌಹಾರ್ದತೆಯಾಗುತ್ತಿದ್ದು, ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ಆಚರಣೆಯಲ್ಲಿ ಭಾಗವಹಿಸುತ್ತಾರೆ. ನಮ್ಮ ಗ್ರೆಸ್ ರಿವೈವಲ್ ಚರ್ಚ್‌ನಲ್ಲಿ ಕ್ರೆಸ್ತ ಬಾಂಧವರೊ ದಿಗೆ ಅನ್ಯ ಧರ್ಮೀಯರು ಸಹ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾಗಿ ಸಾಮರಸ್ಯ ಮೆರೆದಿದ್ದಾರೆ ಎಂದು ತಿಳಿಸಿದರು.