ರಜೆ ದಿನ ರಾಮನಾಥಪುರದಲ್ಲಿ ಭಕ್ತರ ದಂಡು "ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಜನವರಿ 5ರಂದು ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ರಜಾ ದಿನವಾದ ಭಾನುವಾರ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಸ್ನಾನಘಟ್ಟ ಭಕ್ತರಿಂದ ತುಂಬಿ ತುಳುಕಿತು. ಈ ಹಿಂದೆ ಡಿ. 7ರಂದು ಜರುಗಿದ ಪ್ರಸನ್ನ, ಶ್ರೀ ಸುಬ್ರಮಣ್ಯಸ್ವಾಮಿ ರಥೋತ್ಸವದಿಂದ ಆರಂಭವಾಗಿರುವ. ಈ ಜಾತ್ರೆಯು ತುಳು ಷಷ್ಠಿಯ ಜನವರಿ 5 ರ ವರೆಗೂ ಜರುಗಲಿದ್ದು, ಒಂದು ತಿಂಗಳಕಾಲ ಪ್ರತಿನಿತ್ಯವೂ ಸಹ ಭಕ್ತರು ಭೇಟಿ ನೀಡುತ್ತಾರೆ.