ವಿಜ್ಞಾನದ ಮೂಲಕ ಪ್ರತಿಭೆಗಳು ಹೊರಹೊಮ್ಮಬೇಕುಮಕ್ಕಳು ವೈದ್ಯರು, ಎಂಜಿನಿಯರ್ ಆಗುವ ಆಸೆಯ ಜತೆಗೆ ದೇಶದ ತಂತ್ರಜ್ಞಾನ ಬೆಳೆಸುವ ವಿಜ್ಞಾನಿಗಳು ಸಮಾಜ ತಿದ್ದುವ ಶಿಕ್ಷಕರಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪ ಮಕ್ಕಳಿಗೆ ತಿಳಿಸಿದರು.ಶಿಕ್ಷಣ ಸಂಯೋಜಕ ಲೋಕೇಶ್ ಮಾತನಾಡಿ, ವಿಜ್ಞಾನದ ಮೂಲಕ ಪ್ರತಿಭೆಗಳು ಹೊರಹೊಮ್ಮಬೇಕು. ಆದ್ದರಿಂದ ಶಿಕ್ಷಕರು ಪ್ರತಿಭಾವಂತ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ವಿಜ್ಞಾನದ ಆವಿಷ್ಕಾರಗಳನ್ನ ಅರಿತು ಪ್ರಯೋಗಗಳನ್ನು ಮಾಡಬೇಕು. ಪ್ರವಾಸಗಳು ವೈಜ್ಞಾನಿಕ ಚಿಂತನೆಯಡಿ ನಡೆದು, ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳನ್ನು ತಿಳಿಸುವ ಪ್ರವಾಸವಾಗಬೇಕು ಎಂದರು.