ಸ್ವಯಂ ಪ್ರೇರಿತ ಅರಸೀಕೆರೆ ಬಂದ್ ಸಂಪೂರ್ಣವಕ್ಫ್ ಹೋರಾಟ ಸಮಿತಿ ಮತ್ತು ಹಿರಿಯ ನಾಗರಿಕರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಕರೆ ನೀಡಲಾಗಿದ್ದ ಸ್ವಯಂಪ್ರೇರಿತ ಅರಸೀಕೆರೆ ಬಂದ್ ಸಂಪೂರ್ಣ ಯಶಸ್ವಿಯಾಯಿತು. ವಕ್ಫ್‌ಗೆ ರೈತನ ಜಮೀನು ಮಠಮಾನ್ಯಗಳು, ಆಸ್ತಿ, ಕಟ್ಟಡ, ನಿವೇಶನ, ದೇವಾಲಯಗಳ ಆಸ್ತಿಗಳು, ಹಳ್ಳಿಗಳು, ಸ್ಮಶಾನಗಳು , ಸರ್ಕಾರಿ ಕಟ್ಟಡ ಸರ್ಕಾರಿ ಆಸ್ತಿಯನ್ನು ಕಬಳಿಸುವ ಕಾನೂನಿನ ಅಧಿಕಾರವನ್ನು ಹಿಂದಿನ ಕಾಂಗ್ರೆಸ್ ಸರ್ಕಾರಗಳು ನೀಡಿದೆ ಎಂದು ರಂಗಭೂಮಿ ಕಲಾವಿದ ಕರಿಯಪ್ಪ ಆರೋಪಿಸಿದರು.