• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಾಸನದಲ್ಲಿ ಭರ್ಜರಿ ಮಳೆ
ಹಾಸನ ನಗರದ ತಮ್ಲಾಪುರ ಆರನೇ ಕ್ರಾಸಿನಲ್ಲಿ ಬಹಳ ಸಮಸ್ಯೆ ಇದ್ದು, ಅದರಲ್ಲೂ ಮಳೆ ಬಂದರೇ ಸಾಕು ನೀರು ಹೋಗಲು ಕಷ್ಟವಿದೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ಚರಂಡಿ ಸಮರ್ಪಕವಾಗಿ ಇಲ್ಲದೆ ರಸ್ತೆ ಮೇಲಿನ ನೀರೆಲ್ಲಾ ಮನೆ ಒಳಗೆ ಬರುತ್ತಿದೆ. ಈ ಸಮಸ್ಯೆಗೆ ನಗರಸಭೆಯವರು ಪರಿಹಾರ ಮಾಡಿಕೊಡಬೇಕು. ಇನ್ನು ಶಾಸಕರು ಕೂಡ ಈ ಬಗ್ಗೆ ಗಮನಹರಿಸಲಿ ಎಂದು ಮನವಿ ಮಾಡಿದರು.
ಅಂಗನವಾಡಿ ಕೇಂದ್ರಗಳಿಗೆ ಕಬ್ಬಿಣದ ಬೀರುಗಳ ವಿತರಣೆ
ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕಬ್ಬಿಣದ ಬೀರುಗಳನ್ನು ಅಧ್ಯಕ್ಷ ಅಬ್ದುಲ್ ಹಕೀಂ ನೇತೃತ್ವದಲ್ಲಿ ಗುರುವಾರ ವಿತರಿಸಲಾಯಿತು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮತ್ತು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಸರಿಯಾಗಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಕೊಡುವ ಮೂಲಕ ಅವರ ಮುಂದಿನ ಬೆಳವಣಿಗೆಗೆ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಅವಶ್ಯವಿರುವ ವಸ್ತುಗಳನ್ನೂ ಸಹ ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿ
ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿಗಳಿದ್ದಂತೆ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು. ಮಾನಸಿಕ ಆಟೋಟಗಳು, ಕ್ರಾಫ್ಟ್, ಚಿತ್ರಕಲೆ, ಕಥೆ ಕಟ್ಟುವುದು, ಕವನ ರಚಿಸುವುದು, ಹೊರ ಸಂಚಾರ ಮುಂತಾದ ಮಹತ್ವದ ಅಂಶಗಳನ್ನು ಒಳಗೊಂಡಿರುವ ಈ ಬೇಸಿಗೆ ಶಿಬಿರ ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ ಎಂದರು.
ಪಿಎಸ್ಐ ಸುರೇಶ್‌ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದ್ದು, ಬಾಣಾವರ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿ ಆವರಣದಲ್ಲಿ ಅಭಿನಂದಿಸಿ ಗೌರವಿಸಿದರು. ಬಾಣಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಒಬ್ಬರಿಗೆ ಸ್ವರ್ಣ ಪದಕ ಲಭಿಸಿರುವುದು ಬಾಣವರ ಜನತೆ ಸಂತಸ ಪಡುವ ವಿಷಯವಾಗಿದೆ. ಇವರ ಕಾರ್ಯದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ಹೀಗೆ ಮುಂದುವರೆಯಲಿ ಹಾಗೂ ಇವರಿಗೆ ಇನ್ನೂ ಹೆಚ್ಚಿನ ಗೌರವಗಳು ಲಭಿಸಲಿ ಎಂದು ಆಶಿಸಿದರು.
ಅರಸೀಕೆರೆ ಪಿಎಲ್‌ಡಿ ಬ್ಯಾಂಕ್ ಜೆಡಿಎಸ್ ತೆಕ್ಕೆಗೆ
ಕಡೇ ಕ್ಷಣದಲ್ಲಿ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಹೆಣೆದ ತಂತ್ರಗಾರಿಕೆ ಫಲ ನೀಡಿದ್ದು ಪಿಎಲ್‌ಡಿ ಬ್ಯಾಂಕ್ ಜೆಡಿಎಸ್ ತೆಕ್ಕೆಗೆ ಬಿದ್ದಿದೆ. ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಎನ್. ಆರ್.ಸಂತೋಷ್ ಕಟ್ಟಾ ಬೆಂಬಲಿಗ ಶಶಿವಾಳ ಗಂಗಾಧರ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬೇವಿನಹಳ್ಳಿ ಯೋಗೀಶ್(ರವಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನನಗೆ ದೊರೆತಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ರೈತರ ಹಿತಕಾಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಸದಸ್ಯರು ಹಾಗೂ ಷೇರುದಾರರಿಗೆ ಭರವಸೆ ನೀಡಿದರು.
ವಿವೇಕಾನಂದ ತತ್ವಾದರ್ಶ ಪಾಲನೆಯಿಂದ ಯಶಸ್ಸು
ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಹೇಳಿದ "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ವಿಶ್ರಮಿಸದಿರಿ " ಎಂಬ ಹಿತನುಡಿಯು ಪೋಷಕರ ಕಂಡ ಕನಸ್ಸು ಮತ್ತು ಶಿಕ್ಷಕರು ಇಟ್ಟ ನಂಬಿಕೆಯ ಉಳಿವಿಗಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶ್ರೀಯುತರ ಮಾತುಗಳನ್ನು ಪಾಲನೆ ಮಾಡಿದಾಗ ಮಾತ್ರ ಉತ್ತಮ ಸಂಸ್ಕಾರದೊಂದಿಗೆ ಯಶಸ್ವಿ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಿ.ಪಿ.ಗಿರೀಶ್ ಸಲಹೆ ನೀಡಿದರು.
ನಗರದಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಲೋಕಾ ಎಸ್ಪಿ ಅಸಮಾಧಾನ

ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದೆ ರಾಶಿರಾಶಿಯಾಗಿ ಬಿದ್ದಿರುವ ಸ್ಥಳಗಳಿಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ನಂದಿನಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.  

ದರ ಏರಿಕೆಯಿಂದ ಆಗೋ ನಷ್ಟವನ್ನು ಸರ್ಕಾರ ತುಂಬಿಕೊಡುತ್ತಾ
ರಾಜ್ಯ ಸರಕಾರವು ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ನಿಂದ ಹಾಲು ಮತ್ತು ಮೊಸರಿನ ದರವನ್ನು ಲೀಟರಿಗೆ ೪ ರು. ಹೆಚ್ಚಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಒಕ್ಕೂಟಗಳಿಗೆ ಭಾರಿ ನಷ್ಟವಾಗಲಿದೆ. ಈ ನಷ್ಟವನ್ನು ರಾಜ್ಯ ಸರ್ಕಾರ ತುಂಬಿಕೊಡುತ್ತದೆಯೇ? ಇದಕ್ಕೆ ಯಾರು ಜವಾಬ್ದಾರರು? ಒಕ್ಕೂಟದಲ್ಲಿ ಇರುವ ಲಾಭದ ಹಣ ಮುಗಿಯುವರೆಗೂ ಸಿಎಂ ಆದೇಶ ಪಾಲನೆ ಮಾಡಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಡಿ. ರೇವಣ್ಣ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ದೇವಾಲಯದ ಉಪಯೋಗಕ್ಕಿರುವ ಗ್ರಾಮಠಾಣಾದಲ್ಲಿ ಇತರೆ ಕಟ್ಟಡ ನಿರ್ಮಾಣ ಬೇಡ
ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಈಶ್ವರ ದೇವಾಲಯಗಳ ಧಾರ್ಮಿಕ ಆಚರಣೆಗೆ ಬಳಕೆಯಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಇತರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ತಿಳಿಸಿದರು. ಈ ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಲು ಮುಂದಾಗಿರುವ ವಿಚಾರ ತಿಳಿದುಬಂದಿದ್ದು, ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಿದರೆ ಅನ್ಯ ಚಟುವಟಿಕೆಗಳು ದೇವಾಸ್ಥಾನದ ಸರಹದ್ದಿನಲ್ಲಿ ನಡೆಯುವ ಸಂಭವವಿದೆ. ಇದರಿಂದ ದೇವಸ್ಥಾನದ ದೇವರ ಕಾರ್ಯಗಳಿಗೆ ಹಾಗೂ ಸಾರ್ವಜನಿಕ ಕಾರ್ಯಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷರ ವಿರುದ್ಧ ಇದೇ ಸೋಮವಾರ ಅವಿಶ್ವಾಸ ನಿರ್ಣಯ
ಮೊದಲೇ ನಿರ್ಧರಿಸಿದಂತೆ ನಗರಸಭೆ ಅಧ್ಯಕ್ಷರ ಅಧಿಕಾರವಧಿ ಆರು ತಿಂಗಳು ಮುಗಿದಿದ್ದರೂ ರಾಜೀನಾಮೆ ನೀಡಿಲ್ಲ. ಆ ಮನುಷ್ಯನಿಗೆ ಗೌರವವಿಲ್ಲ. ದಿಮಾಕು ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಮುಂದಿನ ಸೋಮವಾರ ಪಕ್ಷದಿಂದ ಸಭೆ ಮಾಡಿ ತೀರ್ಮಾನ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿ ಸಿಡಿಮಿಡಿಗೊಂಡರು.
  • < previous
  • 1
  • ...
  • 123
  • 124
  • 125
  • 126
  • 127
  • 128
  • 129
  • 130
  • 131
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved