ಪಂಚೇಂದ್ರಿಯಗಳು ಬಹಳ ಮುಖ್ಯ ಎಂದ ಗೂಗಲ್ ವೈದ್ಯ ನವನ್ನೆ ಚಂದ್ರಪ್ಪಚನ್ನರಾಯಪಟ್ಟಣ ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ಸುಮಾರು ೩೫೦ ಮಕ್ಕಳು ಹಾಗೂ ಪೋಷಕರ ಆರೋಗ್ಯ ತಪಾಸಣಾ ಕಾರ್ಯ ನಡೆಸಿ ಮಾತನಾಡಿದರು. ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರಗಳ ಸೇವನೆ ಮಾಡಬೇಕು, ಮೊಬೈಲ್ ಗೀಳನ್ನು ಮಕ್ಕಳು ಬಿಡಬೇಕು. ಬೆಳಕಿನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವಿರಲಿ, ಕಣ್ಣಿಗೆ ಹೆಚ್ಚು ಆಯಾಸ ನೀಡಬಾರದು. ಸಿಹಿ ಪದಾರ್ಥಗಳ ಸೇವನೆಯ ಮೇಲೆ ಮಿತಿ ಇರಲಿ, ಕಣ್ಣು ಸೂಕ್ಷ್ಮವಾದ ಅಂಗವಾಗಿದ್ದು, ಹೆಚ್ಚು ಜಾಗ್ರತೆ ಅಗತ್ಯ ಎಂದು ಗೂಗಲ್ ಕಂಪನಿ ತಜ್ಞ ವೈದ್ಯ ಹಾಗೂ ಪಿಜಿಶಿಯನ್ ಡಾ. ನವನ್ನೆ ಚಂದ್ರಪ್ಪ ಹೇಳಿದರು.