ಮಹಿಳಾ ಕಾನೂನುಗಳ ದುರ್ಬಳಕೆಯೇ ಹೆಚ್ಚಾಗಿದೆಪೋಕ್ಸೋ ಹಾಗೂ ಮಹಿಳಾ ಕಾನೂನುಗಳು ಸದುಪಯೋಗಕ್ಕಿಂತ ದುರುಪಯೋಗ ಆಗುತ್ತಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದು, ಇದು ಕೇಳುವುದಕ್ಕೂ, ನೋಡುವುದಕ್ಕೂ ಬಹಳ ಬೇಸರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದ ನೀವು ಸೂಕ್ಷ್ಮತೆಯನ್ನು ಅರಿತು, ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕಾನೂನಿನ ಸದ್ಭಳಕೆ ವಿಷಯದಲ್ಲಿ ಕಾಳಜಿ ತೋರಬೇಕಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಚೇತನಾ ಸಲಹೆ ನೀಡಿದರು. ಪೋಷಕರು ನಂಬಿಕೆ ಇಟ್ಟು, ಹೊರಗೆ ಕಳುಹಿಸುತ್ತಾರೆ, ಅವರ ನಂಬಿಕೆಗೆ ಚ್ಯುತಿ ಬರದಂತೆ ನಡೆಯಬೇಕು ಎಂದು ತಿಳಿಸಿ, ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.