• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಿದ್ದಾಪುರ ಗೇಟ್‌ನಲ್ಲಿ ಕೊಣನೂರು ಮಡಿಕೇರಿ ರಾಜ್ಯ ಹೆದ್ದಾರಿ ತಡೆ
ಕೆಎಸ್ಸಾರ್ಟಿಸಿ ಬಸ್ಸಿನ ನಿರ್ವಾಹಕರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರ ದೌರ್ಜನ್ಯ ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಬಂದ್‌ ಬೆಂಬಲಿಸಿ ಸಮೀಪದ ಕೊಣನೂರಿನ ಕೊಣನೂರು-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ರಾಘವೇಂದ್ರಗೌಡ ನೇತೃತ್ವದಲ್ಲಿ ಸಿದ್ದಾಪುರ ಗೇಟ್ ಸರ್ಕಲ್‌ನಲ್ಲಿ ವಾಹನಗಳನ್ನು ತಡೆಗಟ್ಟಿ ಬಂದ್‌ಗೆ ಬೆಂಬಲ ಸೂಚಿಸಿದರು.
ಹರಿಹರಪುರದಲ್ಲಿ ದುರ್ಗಾಪರಮೇಶ್ವರಿ ಉಡಸಲಮ್ಮ ಜಾತ್ರೆ
ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಹರಹರಪುರ ಗ್ರಾಮದ ಶ್ರೀ ದುರ್ಗಪರಮೇಶ್ವರಿ ಉಡಸಲಮ್ಮ ಜಾತ್ರೆ ಶನಿವಾರ ಸಂಪ್ರದಾಯದ ಆಚರಣೆಯಂತೆ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ ನಂತರ ಜಾತ್ರೆಗೆ ಬಂದ ಭಕ್ತರಿಗೆ ಅನ್ನಸಂರ್ಪಣೆ ವ್ಯವಸ್ಥೆ ಮಾಡಿದ್ದರು. ಸಿಡಿ ಹಾರಿಸಬೇಕೆ, ಬೇಡವೇ ಎನ್ನು ವಿಚಾರದಲ್ಲಿ ಗೊಂದಲ ಉಂಟಾಗಿದ್ದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಡಿವೈಎಸ್ಪಿ ಶಾಲು ಗ್ರಾಮದಲ್ಲಿದ್ದು ಸಿಡಿ ಉತ್ಸವ ಆಚರಿಸದಂತೆ ಮನವೊಲಿಸಿದ ಕಾರಣ ಸಿಡಿ ಉತ್ಸವ ನಡೆಯಲಿಲ್ಲ.
ಮಹಿಳೆಯ ಸ್ವಾಭಿಮಾನದ ಬದುಕಿಗೆ ಕಾನೂನು ಅರಿವು ಅಗತ್ಯ
ನೊಂದ, ಸಂತ್ರಸ್ತ ಮಹಿಳೆಯರು ಸ್ವಾಭಿಮಾನ ಉಳಿಸಿಕೊಳ್ಳಲು ಕಾನೂನು ಅರಿವು, ನೆರವು ಅಗತ್ಯ ಎಂದು ವಕೀಲ ಎಚ್. ಆರ್‌. ಚಂದ್ರು ಹೇಳಿದರು. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಭ್ರೂಣಹತ್ಯೆ, ಕನಿಷ್ಠ ವೇತನ ನೀಡದೇ ಇರುವುದು, ಉದ್ಯೋಗಸ್ಥೆ ಮಹಿಳೆಗೆ ಸೌಲಭ್ಯಗಳು ನೀಡಬೇಕು. ನೊಂದ ಹಾಗೂ ದೌರ್ಜನ್ಯಕ್ಕೆ ಒಳಗಾದ ಸಂತ್ರೆಸ್ತೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಪ್ರತಿ ನ್ಯಾಯಾಲಯದಲ್ಲಿ ಈ ವ್ಯವಸ್ಥೆ ಇದೆ ನೊಂದ ಮಹಿಳೆಯರು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನರ ಆರೋಗ್ಯ ಸುಧಾರಣೆಯಲ್ಲಿ ದಾದಿಯರ ಶ್ರಮವಿದೆ
ವೈದ್ಯರು ರೋಗಿಗಳ ಕಾಯಿಲೆಗಳನ್ನು ಸೂಚಿಸಿ ಚಿಕಿತ್ಸೆಗೆ ಸೂಚಿಸಿದರೇ ದಾದಿಯರು ಅವರ ಆರೋಗ್ಯವನ್ನು ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಶ್ರಮಿಸುತ್ತಾರೆ. ಇವರ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾರತಿ ಹೇಳಿದರು. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರತಿ ಹಂತದಲ್ಲೂ ಧೈರ್ಯ ತುಂಬಿ ರೋಗಿಗಳು ಆರೋಗ್ಯವನ್ನು ಹೊಂದಲು ಸರಿಯಾದ ಸಮಯಕ್ಕೆ ಔಷಧೋಪಚಾರ ಮಾಡುವಲ್ಲಿ ಗಮನಹರಿಸುವವರು ದಾದಿಯರು ಎಂದರು.
ಎಂಇಎಸ್‌ ಗೂಂಡಾಗಳ ಗಡಿಪಾರಿಗೆ ಆಗ್ರಹ
ಕನ್ನಡಿಗರ ಮೇಲೆ ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡಿದ ಎಂಇಎಸ್‌ ಗೂಂಡಾಗಳ ವಿರುದ್ಧ ಕನ್ನಡಪರ ಸಂಘಟನೆಗಳ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತು ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದಂತೆ ಶನಿವಾರ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಬಂದ್‌ ಬೆಂಬಲಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬೆಳಗಾವಿಯಲ್ಲಿ ಗೂಂಡಾವರ್ತನೆ ತೋರುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ನುಗ್ಗೇಹಳ್ಳಿಯನ್ನು ಧಾರ್ಮಿಕ ಪ್ರವಾಸಿ ಕೇಂದ್ರ ಮಾಡುವಂತೆ ಒತ್ತಾಯ
ನುಗ್ಗೇಹಳ್ಳಿ ಗ್ರಾಮವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಗ್ರಾಮದಲ್ಲಿ ಕ್ರಿ. ಶ. 1543 ಮತ್ತು 1249 ಹಾಗೂ 1246ರಲ್ಲಿ ಶ್ರೀ ಚಂದ್ರಮೌಳೇಶ್ವರ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಸದಾಶಿವ ಸ್ವಾಮಿ, ಶ್ರೀ ಜಯಗೊಂಡೇಶ್ವರ ದೇವಾಲಯಗಳನ್ನು ಆಗಿನ ವಿಜಯನಗರ ಸಾಮ್ರಾಜ್ಯದ ದೊರೆಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾವೆಗಳು ದೊರೆತಿದ್ದು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸಿ ಧಾರ್ಮಿಕ ಕ್ಷೇತ್ರದಂತೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಈ ದೇವಾಲಯಗಳು ಇನ್ನೂ ಹೆಚ್ಚು ಪ್ರಸಿದ್ಧಿ ಹೊಂದುವುದರ ಜೊತೆಗೆ ಈ ಭಾಗದ ಇತಿಹಾಸ ಎಲ್ಲರಿಗೂ ತಿಳಿಯುತ್ತದೆ.
ಹಾಸನದಲ್ಲಿ ಬಂದ್‌ ಕರೆಗೆ ನೀರಸ ಪ್ರತಿಕ್ರಿಯೆ
ಕನ್ನಡಿಗರ ಮೇಲೆ ಬೆಳಗಾವಿಯ ಎಂಇಎಸ್ ಗೂಂಡಾಗಳು ಹಲ್ಲೆ ಮಾಡುವುದನ್ನು ಖಂಡಿಸಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಶನಿವಾರ ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆ.ಎಸ್.ಆರ್‌.ಟಿ.ಸಿ. ಬಸ್, ಖಾಸಗೀ ಬಸ್, ಆಟೋ, ಕಾರು ಸೇರಿದಂತೆ ಎಲ್ಲಾ ವಾಹನಗಳು ಎಂದಿನಂತೆ ಸಂಚರಿಸಿದವು. ಇನ್ನು ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಯಾವ ಕಚೇರಿಗಳು ಬಾಗಿಲು ಹಾಕಲಿಲ್ಲ. ಆದರೇ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈಜಲು ಹೋದ ಯುವಕರಿಬ್ಬರು ಸಾವು
ಹೆನ್ನಲಿ ಗ್ರಾಮದ ಎತ್ತಿನಹೊಳೆ ಸೇತುವೆ ಸಮೀಪ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಕಾಶ್ ನದಿಗೆ ಇಳಿದು ಈಜಾಡುತ್ತಿದ್ದ ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಲಾರಂಭಿಸಿದ್ದಾನೆ. ಈತನನ್ನು ರಕ್ಷಿಸಲು ತೆರಳಿದ ಭರತ್ ಸಹ ನೀರಿನ ಸೆಳೆತದಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಬಾಳೆಹಳ್ಳ ಗ್ರಾಮದ ಭರತ್ (೩೪) ಹಾಗೂ ತಾಲೂಕಿನ ಕಾಟಿಹಳ್ಳಿ ಗ್ರಾಮದ ಪ್ರಕಾಶ್(೨೯) ಮೃತರು.
ಕರ್ನಾಟಕ ಬಂದ್‌ ಅರಸೀಕೆರೆಯಲ್ಲಿ ಸಂಪೂರ್ಣ ವಿಫಲ
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಹುಟ್ಟೂರಾಗಿರುವುದರಿಂದ ಸಹಜವಾಗಿಯೇ ತಾಲೂಕಿನಲ್ಲಿ ಕರವೇ ಸಂಘಟನೆ ಪ್ರಬಲವಾಗಿದೆ. ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಂದ್‌ಗೆ ಬೆಂಬಲ ನೀಡದ ಕಾರಣ ಸಹಜ ದಿನಗಳಂತೆ ಅಂಗಡಿ ಮುಂಗಟ್ಟುಗಳು ನಗರದಲ್ಲಿ ತೆರೆದರೆ, ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು. ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಬಂದ್ ಹೆಸರಿನಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಬಂದೋಕಮಬಸ್ತ್ ಮಾಡಿದ್ದು ಕಂಡು ಬಂತು.
ನಮ್ಮ ತಂಡ ಗೆದ್ದರೆ ಹೊನ್ನೇಗೌಡರ ತಂಡದ ಅಕ್ರಮ ಬಯಲಿಗೆ
ಸಾರಿಗೆ ನಿಗಮದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರದ ಕುರಿತು ಚರ್ಚೆಗಳು ಜೋರಾಗಿವೆ. ಇದೀಗ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ತಂಡದ ೧೫ ಜನ ಗೆದ್ದ ಕೂಡಲೇ ಹೊನ್ನೇಗೌಡರ ತಂಡ ಮಾಡಿದೆ ಎನ್ನಲಾಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗುವುದು. ಕಾರ್ಮಿಕರಿಗೆ ಆದ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಕೆ.ಎಸ್.ಆರ್‌.ಟಿ.ಸಿ. ಸ್ಟಾಫ್‌ ಅಂಡ್ ಫೆಡರೇಷನ್ ಬೆಂಗಳೂರು ಕಾರ್ಯಾಧ್ಯಕ್ಷ ಹಾಗೂ ಹಾಸನ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಟಿ. ರಂಗೇಗೌಡ ತಿಳಿಸಿದರು.
  • < previous
  • 1
  • ...
  • 132
  • 133
  • 134
  • 135
  • 136
  • 137
  • 138
  • 139
  • 140
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved