ರಂಗಕಲೆ ಮನರಂಜನಾ ಮಾಧ್ಯಮವಾಗಿ ಜೀವಂತಿಕೆ ಉಳಿಸಿಕೊಂಡಿದೆಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಒಂಬತ್ತು ದಿನಗಳ ನಾಟಕೋತ್ಸವದ ೨ನೇ ದಿನವಾದ ಶನಿವಾರ ಹಾಸನದ ಶ್ರೀ ಮೇಲುಕೋಟೆ ಚಲುವನಾರಾಯಣಸ್ವಾಮಿ ಕಲಾಸಂಘದ ಕಲಾವಿದರು ಕೆ.ಆರ್. ಬಾಲಕೃಷ್ಣ ಕಟ್ಟಾಯ, ಕಲ್ಲಯ್ಯ (ಕುಶಾಲ್), ದೇವರಾಜು ಗೊರೂರು, ಎಚ್.ಎಂ.ಪ್ರಭಾಕರ್, ಟಿ.ಆರ್.ಪ್ರಕಾಶ್, ಎಸ್.ಎಲ್.ಚಂದ್ರಶೇಖರ್ ನೇತೃತ್ವದಲ್ಲಿ ಸೀಗೆನಾಡು ಪಾಲಾಕ್ಷಾಚಾರ್ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.