ವಕೀಲರು ವೃತ್ತಿ ಪಾವಿತ್ರ್ಯತೆ ಕಾಯ್ದುಕೊಳ್ಳಲಿಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ವಕೀಲ ವೃತ್ತಿ ಅತ್ಯಂತ ಘನತೆಯ ವೃತ್ತಿಯಾಗಿದ್ದು, ವಕೀಲರು ವೃತ್ತಿ ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ತಿಳಿಸಿದರು. ವಕೀಲರ ಸಂಘ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವ ಜತೆಗೆ ಸಾರ್ವಜನಿಕ ಹಕ್ಕುಗಳ ರಕ್ಷಣೆಯನ್ನೂ ವಕೀಲರು ಮಾಡಬೇಕಿದೆ. ವಕೀಲರು ಎಲ್ಲ ವಿಷಯಗಳ ಕುರಿತು ಜ್ಞಾನ ಹೊಂದಲು ನಿರಂತರ ಅಧ್ಯಯನ ನಡೆಸಬೇಕು ಎಂದರು.