ಬಹುತೇಕ ಕಾರ್ಮಿಕರು ಶಾಸನಬದ್ಧ ಸೌಲಭ್ಯಗಳಿಂದ ವಂಚಿತರುಅಸಂಘಟಿತ ಕಾರ್ಮಿಕ ಕಾರ್ಡ್ ನೀಡಲಾಗುತ್ತಿದ್ದು, ಅದನ್ನು ಎಲ್ಲಾ ಕಾರ್ಮಿಕ ವರ್ಗದವರು ಪಡೆಯುವಂತೆ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ವಿಜಯಕುಮಾರ್ ತಿಳಿಸಿದರು. ಪಟ್ಟಣದ ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ನೋಂದಣಿ ಅಭಿಯಾನದಲ್ಲಿ ಕಾರ್ಮಿಕ ಕಾರ್ಡನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಾರಿಗೆ, ಟೈಲರ್ ಹಾಗೂ ಫೋಟೋಗ್ರಫಿ ಕಾರ್ಮಿಕರಿಗೆ ನೋಂದಣಿ ಮಾಡುವ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಲವತ್ತಕ್ಕೂ ಹೆಚ್ಚು ಕಾರ್ಮಿಕರಿಗೆ ನೋಂದಣಿ ಮಾಡಿಸಲಾಯಿತು.