ವಾಯುಮಾಲಿನ್ಯ ತಡೆಗಟ್ಟದಿದ್ದರೆ ಅಪಾಯ ತಪ್ಪಿದ್ದಲ್ಲವಾಯುಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ತೊಂದರೆಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯದಿದ್ದರೆ ಮುಂದಿನ ದಿನದಲ್ಲಿ ಅಪಾಯ ತಪ್ಪಿದ್ದಲ್ಲ ಮತ್ತು ಶುದ್ಧ ಗಾಳಿಯನ್ನು ಹಣ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗದಂತೆ ಜವಾಬ್ದಾರಿಯ ವರ್ತನೆ ನಮ್ಮ ಮೇಲಿದೆ ಎಂದು ಪರಿಸರವಾದಿ ರಾಮಚಂದ್ರ ಎಚ್ಚರಿಸಿದರು. ಸರ್ಕಾರ ವಾಯು ಮಾಲಿನ್ಯದ ಅಪಾಯದ ಬಗ್ಗೆ ಎಚ್ಚರಿಸಿದ್ದು, ಎಲ್ಲಾ ಶಾಲೆಗಳಲ್ಲಿ ಅಮ್ಮನ ಹೆಸರಲ್ಲಿ ಒಂದು ಸಸಿ ನೆಟ್ಟು ಬೆಳೆಸಿ ಎಂದು ಹೇಳುತ್ತಿದೆ. ಪರಿಸರ ಸಮತೋಲನಕ್ಕೆ ಶೇ.೬೫ ರಷ್ಟು ಅರಣ್ಯ ಪ್ರದೇಶ ಇರಬೇಕು, ಆದರೆ ಅರಣ್ಯ ಪ್ರದೇಶ ಶೇ.೩೫ರಷ್ಟು ಮಾತ್ರ ಇದ್ದು, ಅಪಾಯವನ್ನು ಸೂಚಿಸುತ್ತಿದೆ ಎಂದರು.