ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಕುರಿತು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷಯ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಕ್ಷಯ ರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಜಾಸ್ತಿ ಕೆಮ್ಮು, ಜ್ವರ, ಕಫ ಬರುವುದು, ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು, ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಕಫ ಪರೀಕ್ಷೆ ಮತ್ತು ಎಕ್ಸೆರೇ ಪರೀಕ್ಷೆಯನ್ನು ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ತಿಳಿಸಿದರು.