• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೇಲೂರು ಪುರಸಭೆ ಮಳಿಗೆಗಳ ಟೆಂಡರ್ ರದ್ದುಪಡಿಸಲು ಡಿಸಿ ಆದೇಶ
ಬೇಲೂರು ಪಟ್ಟಣದ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ತರುವ ಲಕ್ಷಾಂತರ ರುಪಾಯಿ ಆದಾಯ ಬರುತ್ತಿದ್ದ ಬಸ್ ನಿಲ್ದಾಣ ಮುಂಭಾಗ ಹಾಗೂ ಮುಖ್ಯ ರಸ್ತೆಯ ಸುಮಾರು ೬೩ ವಾಣಿಜ್ಯ ಮಳಿಗೆಗಳಿಗೆ ಇದೇ ಜನವರಿ ೨ರಂದು ಹರಾಜು ಪ್ರಕ್ರಿಯೆ ನಡೆದಿತ್ತು. ಅದರೆ ಈ ಹಿಂದೆ ಲಕ್ಷಾಂತರ ರು.ಗಳಿಗೆ ಹರಾಜಾಗಿದ್ದ ಮಳಿಗೆಗಳು, ನಂತರ ಉಳ್ಳವರು ಕಡಿಮೆ ಬಿಡ್‌ನಲ್ಲಿ ಭಾಗವಹಿಸಿ ಅತಿ ಕನಿಷ್ಠ ಬೆಲೆಗೆ ಹರಾಜು ಪ್ರಕ್ರಿಯೆ ನಡೆದಿದ್ದು ಇದರಲ್ಲಿ ಬಾರಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಫಿ ಬೆಳೆಗಾರರಿಗೆ ಜೇನುತುಪ್ಪ ಉಣಬಡಿಸಿದ ಹೂ ಮಳೆ
ಕೊಡಗಿನ ಗಡಿಯನ್ನು ಹೊಂದಿಕೊಂಡಿರುವ ಯಸಳೂರು ಹೋಬಳಿಯಲ್ಲಿ ಮಾರ್ಚ್ ೧೨ರಂದು ಸಹ ಮಳೆ ಹನಿ ಭೂಮಿ ಸೇರದಾಗಿದ್ದರೆ, ಮಾರ್ಚ್ ೨೪ರಂದು ಸಹ ಮಳೆಯಾಗದಿರುವುದು ಬೆಳೆಗಾರರ ಪಾಲಿಗೆ ಮುಂಗಾರು ಕಹಿಯಾಗಿದೆ. ಮಾರ್ಚ್ ತಿಂಗಳ ೧೨ರಂದು ಹೆತ್ತೂರು ಹೋಬಳಿಯಲ್ಲಿ ಸಾಧಾರಣ ಹಾಗೂ ಹಾನುಬಾಳ್ ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿತ್ತು. ಆದರೆ, ಈ ಎರಡು ಹೋಬಳಿಯಲ್ಲಿ ಮಾರ್ಚ್೨೪ ರಂದು ಮಳೆಯಾಗದಿರುವುದು ಈ ಎರಡು ಹೋಬಳಿಯ ಕಾಫಿ ಬೆಳೆಗಾರರಿಗೆ ಬೇಸರ ಹೆಚ್ಚಿಸಿದೆ.
ನುಗ್ಗೆಳ್ಳಮ್ಮ ಕೆಂಪಮ್ಮ ದೇವಿ ಅದ್ಧೂರಿ ರಥೋತ್ಸವ
ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀನುಗ್ಗೇಳ್ಳಮ್ಮ, ಶ್ರೀ ಕೆಂಪಮ್ಮ ದೇವಿಗೆ ಬೆಳಿಗ್ಗೆಯಿಂದಲೇ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಬೆಂಗಳೂರು ಸೇರಿದಂತೆ ಈ ಭಾಗದ ಬಸವನಪುರ, ಮುದ್ದನಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಹೂವಿನಹಳ್ಳಿ, ಸಮುದ್ರ ಹಳ್ಳಿ, ವಿರುಪಾಕ್ಷಪುರ, ಜಿ.ಎನ್. ಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ಶ್ರೀನುಗ್ಗೆಳ್ಳಮ್ಮ, ಶ್ರೀ ಕೆಂಪಮ್ಮಗೆ ರಾತ್ರಿ ಮಹಾಮಂಗಳಾರತಿ ನಂತರ ಸೋಮನ ಕುಣಿತದೊಂದಿಗೆ ದೇವಾಲಯದ ಆವರಣದಲ್ಲಿ ಉತ್ಸವ ನಡೆಸಿ ನಂತರ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ
ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ತರಬೇತಿ ಹಮ್ಮಿಕೊಳ್ಳುವುದು ನನ್ನ ಕನಸಾಗಿದೆ. ವಿದ್ಯೆ ಅದು ನಮ್ಮ ಹಕ್ಕು, ಕನಸುಗಾರರಾಗಿದ್ದರೇ ನನಸು ನಿಜವಾಗಲೂ ಕೂಡ ಆಗುತ್ತದೆ. ನನ್ನ ಸಂಪೂರ್ಣ ವಿದ್ಯಾಭ್ಯಾಸ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಆಗಿದೆ. ನನಗೆ ಸಂಸ್ಕಾರ ಬಂದಿರುವುದೇ ಈ ಶಾಲಾ ಕಾಲೇಜುಗಳಲ್ಲಿ ಕಲಿತಿದ್ದರಿಂದ. ಗ್ರಾಮೀಣ ಮಕ್ಕಳ ವಿಕಸನಕ್ಕೆ ಈ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶಾಸಕ ಮಂಜು ಹೇಳಿದರು.
ವಾಸವಿ ಕ್ಲಬ್‌ನಿಂದ ಕೃತಕ ಕೈಕಾಲು ಜೋಡಣಾ ಶಿಬಿರ
ವಾಸವಿ ಕ್ಲಬ್ ಮತ್ತು ಬೆಂಗಳೂರಿನ ಓಮೆಗಾ ರೀಹ್ಯಾಬ್ ಫೆಡರೇಷನ್ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ, ವ್ಹೀಲ್ ಚೇರ್, ಶ್ರವಣ ಸಾಧನೆಗಳು ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ೨೦ ಜನರಿಗೆ ಕೈ ಹಾಗೂ ಕಾಲು ಜೋಡಣೆ, ೬ ಜನರಿಗೆ ಶ್ರವಣ ಸಾಧನ ಹಾಗೂ ೪ ಜನರಿಗೆ ವ್ಹೀಲ್ ಚೇರ್ ವಿತರಿಸಲಾಯಿತು. ವಾಸವಿ ಕ್ಲಬ್ ಇಂದು ಕೈಗೊಂಡಿರುವ ಸಮಾಜ ಸೇವಾ ಕಾರ್ಯ ಹಾಗೂ ಓಮೆಗಾ ರೀಹ್ಯಾಬ್ ಫೆಡರೇಷನ್‌ನವರ ಸಹಕಾರ ಹಾಗೂ ನಿಸ್ವಾರ್ಥ ಸೇವೆ ಅನನ್ಯವಾಗಿದೆ ಎಂದು ಪ್ರಶಂಶಿಸಿದರು.
ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸೋಣ ಎಂದ ಶಾಸಕ ಶಿವಲಿಂಗೇಗೌಡ
ಗ್ರಾಮೀಣ ಕ್ರೀಡೆಗಳು ದೇಹದ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲದೆ ಎಲ್ಲರ ಗಮನವನ್ನು ಸೆಳೆಯುತ್ತವೆ. ಅದೇ ರೀತಿ ಈ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯು ಕೂಡ ಅಷ್ಟೇ ಇದೊಂದು ರೀತಿಯ ಜೆಟಿಯ ಕಾಳಗವಿದ್ದಂತೆ ಹಳ್ಳಿಕಾರ್‌ ಎಂಬುದು ಅದು ಕೇವಲ ಗೋತಳಿ ಅಷ್ಟೇ ಅಲ್ಲ ಅದು ಮೈಸೂರು ಮಹಾರಾಜರ ಕಾಲದಲ್ಲಿಯೇ ಹಳ್ಳಿಕಾರ್ ಎಂಬುದು ಬಹಳ ಹೆಸರುವಾಸಿಯಾಗಿತ್ತು. ಈ ಹಳ್ಳಿಕಾರ್ ಗೋತಳಿಯ ಹಾಲು ಔಷಧೀಯ ಗುಣಗಳನ್ನು ಹೊಂದಿತ್ತು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎಂದರು.
ಆನೆ ಕನ್ನಂಬಾಡಿಯಮ್ಮನ ದೇವಸ್ಥಾನ ಲೋಕಾರ್ಪಣೆ
ಬಸವನಹಳ್ಳಿಕೊಪ್ಪಲು ಆನೆಕನ್ನಂಬಾಡಿಯಮ್ಮ ದೇವಸ್ಥಾನದಲ್ಲಿ ಮಾ.21ರಿಂದ 23ರವರೆಗೆ ವಿವಿಧ ರೀತಿಯ ಹವನ ಹೋಮ ಪೂಜಾದಿ ಕೈಂಕರ್ಯಗಳು ಜರುಗಿದವು. ಧಾರ್ಮಿಕ ಕಾರ್ಯಗಳು ಮಾನವನಿಗೆ ನೆಮ್ಮದಿಯನ್ನು ನೀಡುತ್ತವೆ. ದೇವಸ್ಥಾನಗಳಿಂದ ಧಾರ್ಮಿಕ ಭಾವನೆ ಬೆಳೆಯಲು ಸಹಕಾರಿಯಾಗಿದೆ. ಆನೆಕನ್ನಬಾಂಡಿಯಮ್ಮ ಎಲ್ಲರಿಗೂ ಮಂಗಳವನ್ನು ಉಂಟುಮಾಡಲ ಎಂದು ಆಶೀರ್ವಚನ ನೀಡಿದರು.
ಮೈಸೂರು ಪ್ರಾಂತ್ಯದ ಏಳಿಗೆಯಲ್ಲಿ ಕಮೀಷನರ್‌ಗಳ ಪಾತ್ರ ಅಪಾರ
ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ಮಾಡಿದ ರಾಜರು ಹಾಗೂ ಕಮಿಷನರ್‌ಗಳು ರಾಜ್ಯಕ್ಕೆ ಆಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಎಂ.ಜಿ. ರಸ್ತೆ) ಸಹಾಯಕ ಪ್ರಾಧ್ಯಾಪಕ ಎಚ್.ವಿ. ಪುರುಷೋತ್ತಮ್ ಅಭಿಪ್ರಾಯಪಟ್ಟರು. ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಮೈಸೂರಿನ ಸಂಸ್ಥಾನದ ಕಲಾಕೃತಿ ಮತ್ತು ವಾಸ್ತುಶಿಲ್ಪದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಹಾಸನದ ಕೃಷಿ ಕಾಲೇಜು ಸ್ಥಳಾಂತರದ ಹಿಂದೆ ಸರ್ಕಾರದ ದುರುದ್ದೇಶವಿದೆ
ಕೃಷಿ ಕಾಲೇಜನ್ನು ಮಂಡ್ಯಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶವಿದ್ದು, ಕಾಲೇಜನ್ನು ಇಲ್ಲೆ ಉಳಿಸದಿದ್ದರೇ ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು. ಕಾಲೇಜಿನ ಅಭಿವೃದ್ಧಿಗಾಗಿ ಹೊಸ ಕೋರ್ಸ್‌ಗಳನ್ನು ಪ್ರಯತ್ನದಲ್ಲಿ ತೊಡಗಿದ್ದೇವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕೋರ್ಸ್‌ಗಳನ್ನು ತರಲು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ರೀತಿ ರೈತರ ಹಿತವನ್ನು ಕಡೆಗಣಿಸುತ್ತಿದೆ. ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದರು.
ರೈಲ್ವೆ ಪೊಲೀಸರ ಕಿರುಕುಳ ಖಂಡಿಸಿ ಗುಜರಿ ವ್ಯಾಪಾರಿಗಳ ಪ್ರತಿಭಟನೆ
ಬೆಂಗಳೂರಿನ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರು ರೈಲ್ವೆ ಇಲಾಖೆಗೆ ಸೇರಿದ ಉಪಕರಣಗಳನ್ನು ಖರೀದಿ ಮಾಡಿರುತ್ತೀರಾ ಎಂದು ನಮಗೆ ಪದೇ ಪದೆ ಕಿರುಕುಳ ನೀಡಿ ನಮ್ಮಿಂದ ಹಣ ಪಡೆಯುತ್ತಿರುತ್ತಾರೆ. ಇದೇ ರೀತಿ ಇಲ್ಲಿನ ಪೊಲೀಸರು ಕೂಡ ಹಣ ವಸೂಲಿ ಮಾಡುತ್ತಿದ್ದು, ನಾವು ದುಡಿದಂತಹ ಹಣವನ್ನೆಲ್ಲಾ ಈ ಮೇಲ್ಕಂಡ ಪೊಲೀಸರಿಗೆ ಕೊಡುತ್ತಿದ್ದು, ಬಡ್ಡಿ ಸಾಲ ಮಾಡಿ ಹಣ ನೀಡಿರುತ್ತೇವೆ ಎಂದು ಗುಜರಿ ವ್ಯಾಪಾರಸ್ಥರು ಆರೋಪಿಸಿ ಪ್ರತಿಭಟಿಸಿದರು.
  • < previous
  • 1
  • ...
  • 130
  • 131
  • 132
  • 133
  • 134
  • 135
  • 136
  • 137
  • 138
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved