ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆಅರಸೀಕೆರೆ ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಕಾರ್ಯವನ್ನು ನೆರವೇರಿಸುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು. ಮುಸ್ಲಿಂ ಜಮಾತ್ ಕಮಿಟಿಯಿಂದ ನಗರದ ಹುಳಿಯಾರ್ ವೃತ್ತಕ್ಕೆ ಶ್ರೀ ಪ್ರಸನ್ನ ಗಣಪತಿ ಮೆರವಣಿಗೆ ಆಗಮಿಸಿದಾಗ ಬೃಹತ್ ಬೃಹತ್ ಹೂವಿನ ಹಾರವನ್ನು ಸಮರ್ಪಿಸಿದರು. ಈ ಮೆರವಣಿಗೆಯಲ್ಲಿ ಕೀಲು ಕುದುರೆ ನರ್ತನ, ಡೊಳ್ಳು ಕುಣಿತ, ವೀರಭದ್ರ ದೇವರ ಕುಣಿತ, ಭದ್ರಕಾಳಿ ಕುಣಿತ, ರಾಣಿಬೆನ್ನೂರು ರೋಡ್ ಆರ್ಕೆಸ್ಟ್ರಾ, ಕಹಳೇ ವಾದ್ಯ, ನಂದೀಧ್ವಜ, ಕುಣಿತ ಹುಲಿವೇಶದ ಕುಣಿತ ಮನ ಸೆಳೆದವು.