ತನ್ನೂರಿನ ಶಾಲೆಗೆ ಹಣಕಾಸಿನ ನೆರವು ನೀಡಿದ ದಂತ ವೈದ್ಯಬೆಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರು ಮರೆಯದ ಡಾ. ಜಗದೀಶ್ ಹಾಗೂ ಡಾ. ಸುಧಾ ದಂಪತಿ ತಾಲೂಕಿನ ಅಜ್ಜೂರು ಗ್ರಾಮದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು ಎಂಬ ಉದ್ದೇಶದಿಂದ 22 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ಕೊಠಡಿ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಕಂಪ್ಯೂಟರ್ ಹಾಗೂ ಇಂಗ್ಲೀಷ್ ವಿಷಯದಲ್ಲಿ ಮಕ್ಕಳು ಪರಿಣಿತಿ ಸಾಧಿಸಲು ಆನ್‌ಲೈನ್ ತರಗತಿ ನಡೆಸುತ್ತಿದ್ದು ಅದಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದಾರೆ. ಡೆಂಟಲ್ ಕೇರ್ ಯಂತ್ರ ಅಳವಡಿಸಿ ವಿದ್ಯಾರ್ಥಿಗಳ ಹಲ್ಲಿನ ಆರೋಗ್ಯದ ಕಾಳಜಿ ವಹಿಸಲಾಗಿದೆ.