ಹಾಸನ ಜಿಲ್ಲೆಯ ವಿವಿಧೆಡೆ ವರ್ಷದ ಮೊದಲ ಮಳೆಜಿಲ್ಲೆಯ ವಿವಿಧೆಡೆ ಈ ವರ್ಷದ ಮೊದಲ ಮಳೆ ಬುಧವಾರ ಧಾರಾಕಾರವಾಗಿ ಸುರಿದಿದೆ. ಹಾಸನ, ಆಲೂರು, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆ ತನ್ನ ಆರ್ಭಟ ತೋರಿದೆ. ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಮಳೆ ಬರುತ್ತದೆ. ಅಂತೆಯೇ ಮೊದಲ ಮಳೆ ಬಂದಿರುವುದು ರೈತರ ಮುಖದಲ್ಲಿ ನಗು ತಂದಿದೆ. ಸಾಕಷ್ಟು ಜನರು ಬೇಸಿಗೆ ಬೆಳೆ ಮಾಡಿಕೊಂಡು ಹಗಲು- ರಾತ್ರಿ ಎನ್ನದೆ ಪಂಪ್‌ಸೆಟ್ ಹಾಗೂ ಕೆರೆಕಟ್ಟೆಗಳಿಂದ ನೀರು ಹಾಯಿಸಲು ಹರಸಾಹಸಪಡುತ್ತಿದ್ದರು. ಈಗ ಅವರಿಗೆ ಅನುಕೂಲವಾಗಿದೆ.