ಶಾಸಕ ಸಿಮೆಂಟ್ ಮಂಜು ವಿರುದ್ಧ ದಲಿತ ಸಂಘಟನೆ ಮುಖಂಡರ ಆಕ್ರೋಶಪರಿಶಿಷ್ಟ ಜಾತಿ, ವರ್ಗದ ಹಿತರಕ್ಷಣಾ ಸಮಿತಿ ತ್ರೈಮಾಸಿಕ ಸಭೆಗೆ ಶಾಸಕ ಸಿಮೆಂಟ್ ಮಂಜುರವರು ಗೈರು ಹಾಜರಾದ್ದರಿಂದ ಕೆರಳಿದ ದಲಿತ ಸಂಘಟನೆ ಮುಖಂಡರು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಇನ್ನು ಮುಂದೆ ತಾಲೂಕಿನಲ್ಲಿ ನಡೆಯುವ ಪ. ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಗೆ ಬರುವುದಿಲ್ಲ. ಸಭೆ ನಡೆಸು ಔಚಿತ್ಯವೂ ಇಲ್ಲ ಎಂದು ಸಭೆಯಿಂದ ಹೊರನಡೆದ ಘಟನೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂಭವಿಸಿತು.