ಕಾಡಾನೆ ದಾಳಿ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ ಸೂಚನೆಹಿರೆಕೋಲೆ ತಗರೆ ಇನ್ನಿತರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಭಾಗಗಳಲ್ಲಿ ಆನೆ ಹಾವಳಿಯಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬಿಕ್ಕೋಡು ಭಾಗಗಳಲ್ಲಿ ಕಟಾವಿಗೆ ಬಂದಂತ ಭತ್ತ, ಜೋಳ ಹಾಗೂ ತೆಂಗನ್ನು ಸಂಪೂರ್ಣ ಹಾನಿಮಾಡಿದ್ದು, ರೈತರಿಗೆ ಸರ್ಕಾರ ನೀಡುವ ಕನಿಷ್ಟ ಪರಿಹಾರ ಬೇಡ, ಆ ಬೆಳೆಗೆ ತಕ್ಕನಾದ ಪರಿಹಾರ ನೀಡುವಂತೆ ಸದನದಲ್ಲಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.