ಎಲ್ಲಾ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಪ್ರಥಮವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲೇಬೇಕು, ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೇ ತಿಂಗಳ ಮೊದಲ ವಾರದಲ್ಲಿ ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಕೆ. ಬೇಕ್ರಿ ರಮೇಶ್ ತಿಳಿಸಿದರು. ಬೆಂಗಳೂರು ಉತ್ತರ ವಿವಿ ಅತಿಥಿ ಉಪನ್ಯಾಸಕರು, ಖಾಯಂ ಅಧಿಕಾರಿಗಳು, ನೌಕರರು ಇಲ್ಲ, ಆಡಳಿತ ವ್ಯವಸ್ಥೆಗೆ ಸಂಕಷ್ಟ ಮೂಲ ಸೌಕರ್ಯಗಳು ಮರೀಚಿಕೆ ಆಗಿದೆ ಎಂದು ಆತಂಕವ್ಯಕ್ತಪಡಿಸಿದರು.