ಬೀದಿನಾಯಿಗಳ ಹಾವಳಿಗೆ ಬೇಸತ್ತ ಸಕಲೇಶಪುರದಲ್ಲಿ ಜನಪಟ್ಟಣದಲ್ಲಿ ಬೀದಿನಾಯಿಗಳ ಉಪಟಳ ಮೀತಿ ಮೀರಿದ್ದು, ನಿರ್ಜನ ಪ್ರದೇಶದಲ್ಲಿ ಜನಜಾನುವಾರುಗಳು ಸಂಚರಿಸುವುದು ದುಸ್ತರವಾಗಿದೆ. ಪಟ್ಟಣದ ಎಪಿಎಂಸಿ ಆವರಣ, ಪಟ್ಟಣದ ಅಜಾದ್ ರಸ್ತೆ, ತೇಜಸ್ವಿ ವೃತ್ತ, ಚಂಪಕನಗರ ಟೋಲ್‌ಗೇಟ್ ಸಮೀಪ ಇರುವ ಪ್ರತಿಯೊಂದು ಬೀದಿನಾಯಿಗಳ ಗುಂಪಿನಲ್ಲಿ ನೂರಕ್ಕೂ ಅಧಿಕ ನಾಯಿಗಳಿದ್ದು, ಕ್ರೂರವಾಗಿ ವರ್ತಿಸುವ ನಾಯಿಗಳಿಂದ ಜನರು ಒಂಟಿಯಾಗಿ ಸಂಚರಿಸುವುದು ಅಸಾಧ್ಯವಾಗಿದೆ. ಸಾಕಷ್ಟು ಬೀದಿನಾಯಿಗಳು ಮಿನಿವಿಧಾನ ಸೌಧದ ಸುತ್ತಲಿನ ಪ್ರದೇಶದಲ್ಲಿ ಬೀಡುಬಿಡುತ್ತಿದ್ದು, ಸಂಜೆವೇಳೆ ನಿರ್ಜನವಾಗುವ ಈ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವುದು ಅಪಾಯಕಾರಿಯಾಗಿದೆ.