ಶ್ರೀರಾಮ ಪ್ರೀತಿ ವಾತ್ಸಲ್ಯಗಳ ಧರ್ಮ ಸಂದೇಶ ಸಾರಿದತ್ರೇತಾಯುಗದಲ್ಲಿ ಸಾಮಾನ್ಯ ಮನುಷ್ಯನಂತೆ ಜನಿಸಿದ ಶ್ರೀರಾಮ, ಪಿತೃವಾಕ್ಯ ಪರಿಪಾಲಕನಾಗಿ, ದುಷ್ಟರ ಸಂಹಾರಕನಾಗಿ, ಶಿಷ್ಟರ ರಕ್ಷಕನಾಗಿ ಮನುಕುಲದ ಶ್ರೇಷ್ಠತೆಗಾಗಿ ಪ್ರೀತಿ, ವಾತ್ಸಲ್ಯಗಳ ಧರ್ಮ ಸಂದೇಶವನ್ನು ಸಾರಿದ್ದಾನೆ ಎಂದು ಸುಕ್ಷೇತ್ರ ಹಾರನಹಳ್ಳಿ ಶ್ರಿ.ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು. ಸಮಾಜವನ್ನು ಹೇಗೆ ಪ್ರೀತಿ, ವಾತ್ಸಲ್ಯದ ಮಮಕಾರದಿಂದ ನೋಡಿಕೊಳ್ಳಬೇಕು ಎನ್ನುವ ಧರ್ಮ ಸಂದೇಶವನ್ನು ಸಮಸ್ತ ಮನುಕುಲಕ್ಕೆ ನೀಡಿದ್ದಾನೆ ಎಂದರು.