ಕನ್ನಡಜ್ಯೋತಿ ರಥದಿಂದ ಕನ್ನಡ ಸಂಸ್ಕೃತಿ ಅರಿವು: ತಹಸೀಲ್ದಾರ್ ಕೃಷ್ಣಮೂರ್ತಿಕನ್ನಡ ನಾಡು, ನುಡಿ, ನೆಲ, ಜಲ, ಕನ್ನಡಾಭಿಮಾನ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಕಾಪಾಡುತ್ತ, ವಿಸ್ತಾರವಾಗಿ ಪಸರಿಸುವ ಜತೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡಜ್ಯೋತಿ ರಥವು ರಾಜ್ಯದಲ್ಲಿ ಸಂಚರಿಸುತ್ತಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು. ಹೊಳೆನರಸೀಪುರಕ್ಕೆ ಆಗಮಿಸಿದ ಕನ್ನಡಜ್ಯೋತಿ ರಥಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.