ಬೆಂಬಲ ಬೆಲೆಯಡಿ ರಾಗಿ ಮಾರುವವರು ಡಿ.31ರೊಳಗೆ ನೋಂದಾಯಿಸಿಕೊಳ್ಳಿಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಗುಣಮಟ್ಟದ ರಾಗಿ ಖರೀದಿಗಾಗಿ ತಾಲೂಕಿನ ರೈತರು ಡಿ.೩೧ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ರೈತರು ತಾಲೂಕು ಕೇಂದ್ರ ಸೇರಿದಂತೆ ನುಗ್ಗೇಹಳ್ಳಿ, ಉದಯಪುರ, ಶ್ರವಣಬೆಳಗೊಳ, ಬಾಗೂರು, ಮತ್ತು ಹಿರೀಸಾವೆಯ ಹೋಬಳಿಗಳಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಮತ್ತು ರೈತಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ೫೦೭ ರೈತರು ನೋಂದಣಿ ಮಾಡಿಸಿಕೊಂಡಿದ್ದು, ಡಿ.೩೧ರವರೆಗೂ ನೋಂದಣಿಗೆ ಅವಕಾಶವಿದ್ದು, ಶೀಘ್ರು ನೋಂದಣಿಗೆ ಮುಂದಾಗಬೇಕು ಎಂದರು.