• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಿದ್ಯುತ್‌ ಸ್ಪರ್ಶವಾಗಿ ಯುವಕರಿಬ್ಬರು ಸಾವು
ವಿದ್ಯುತ್ ಸ್ಪರ್ಶದಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗರಿಘಟ್ಟದಲ್ಲಿ ಗುರುವಾರ ನಡೆದಿದೆ. ಗರಿಘಟ್ಟದ ಮಹೇಂದ್ರ ಎಂಬುವರ ನೂತನ ಮನೆ ನಿರ್ಮಾಣದ ಬಾಗಿಲು ಕಿಟಕಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವ ವೇಳೆ ಸೃಜನ್ ಗೆ ವಿದ್ಯುತ್ ತಗುಲಿದೆ. ಇವನನ್ನು ರಕ್ಷಿಸಲು ಹೋದ ಸಂಜಯ್‌ಗೂ ವಿದ್ಯುತ್ಯು ಸ್ಪರ್ಶಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಆಸ್ಪತ್ರೆ ಬಳಿ ತೆರಳಿದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ
ಸಿನಿಮೀಯ ಮಾದರಿಯಲ್ಲಿ ಅಕ್ರಮವಾಗಿ ಗೋ ಸಾಗಾಣೆ ಮಾಡುತ್ತಿದ್ದ ವಾಹನವೊಂದನ್ನು ಬೆನ್ನಟ್ಟಿ ಗೋವುಗಳನ್ನು ಹಿಂದೂ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡಾಗ ವಾಹನದಲ್ಲಿ ಸುಮಾರು ೧೦ ಗೋವುಗಳನ್ನು ಅಮಾನುಷವಾಗಿ ಕಟ್ಟಿಹಾಕಿರುವುದು ಕಂಡುಬಂದಿದೆ. ಆಲೂರು ತಾಲೂಕು ತಿಮ್ಮನಹಳ್ಳಿಯ ದೇವರಿಗೆ ಬಿಟ್ಟಿದ್ದ ಬಸವನನ್ನು ಕದ್ದು ತುಂಬಿದ್ದ ಗೋಕಳ್ಳ ತನ್ನದೇ ಊರಿನಿಂದ ಗೋವುಗಳನ್ನ ಕದ್ದು ತುಂಬಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಳೆಯಿಂದ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏಪ್ರಿಲ್ 12 ಮತ್ತು 13ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್ ವೇಣುಕುಮಾರ್ ತಿಳಿಸಿದರು. ಸಂಸದ ಶ್ರೇಯಸ್ ಪಟೇಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಆಶಯ ನುಡಿಗಳ ಆಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಟಿ.ವಿ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಗ್ರಹಾರ ಬೆಳಗುಲಿ ಸೊಸೈಟಿ ಅಧ್ಯಕ್ಷರಾಗಿ ಮೂಡಲಗಿರಿ ಗೌಡ
ಮೂಡಲಗಿರಿ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅಶೋಕ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಲೀಲಾ ಘೋಷಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೂವಿನಹಳ್ಳಿ ಮೂಡಲಗಿರಿಗೌಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಬ್ಯಾಂಕ್‍ನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣ ಅವರ ಸಲಹೆ ಸಹಕಾರ ಪಡೆದು ಹೆಚ್ಚಿನ ಪ್ರಮಾಣದಲ್ಲಿ ಶೇರುದಾರ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಣ್ಣ ಮಾಸಿದ ಹೊಯ್ಸಳ ಲಾಂಛನದ ಪುತ್ಥಳಿಗೆ ಕಾಯಕಲ್ಪ
ಹೊಯ್ಸಳ ಲಾಂಛನದ ಪುತ್ಥಳಿ ಸೂಕ್ತ ನಿರ್ವಹಣೆ ಇಲ್ಲದೆ ಧೂಳು ಹಿಡಿದು ಬಣ್ಣ ಮಾಸಿತ್ತು. ಇಲ್ಲಿಗೆ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಅವರು ಸ್ಥಳಕ್ಕೆ ಆಗಮಿಸಿ ಒಂದೇ ದಿನದಲ್ಲಿ ಹೊಯ್ಸಳ ಪುತ್ಥಳಿಗೆ ಕಾಯಕಲ್ಪ ನೀಡಿದ್ದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಲ್ಪಮಟ್ಟಿನ ನಿರ್ವಹಣೆ ಕಡಿಮೆಯಾಗಿ ಬಣ್ಣ ಮಾಸುವ ಮೂಲಕ ಧೂಳು ಹಿಡಿದು ಅಸ್ವಚ್ಛತೆಯಾಗಿ ಕಾಣುತ್ತಿದೆ ಎಂದು ಸಾರ್ವಜನಿಕರು ಮಾಧ್ಯಮಗಳ ಮೂಲಕ ತಮ್ಮ ದೂರು ವ್ಯಕ್ತಪಡಿಸಿದ್ದರು. ಧೂಳು ಹಿಡಿದ ಹೊಯ್ಸಳರ ಲಾಂಛನ ಪುತ್ಥಳಿಗೆ ಪುರಸಭೆಯಿರದ ಕಾಯಕಲ್ಪ ನೀಡಲಾಗಿದೆ ಎಂದರು.
ಬೆಲೆ ಏರಿಕೆಯ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ
ಬೆಲೆ ಏರಿಕೆಯ ಖಂಡಿಸಿ ಬೆಂಗಳೂರು ನಗರದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ವರ್ಷದಲ್ಲಿ ನಿರಂತರವಾಗಿ ಬೆಲೆ ಏರಿಕೆ ಬರೆಯ ಶಾಕ್ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ರಾಜ್ಯದಲ್ಲಿ ಪ್ರಾರಂಭವಾಗಿದೆ. ಬೆಂಗಳೂರು ನಗರದಲ್ಲಿ ಬೃಹತ್ ರ‍್ಯಾಲಿ ಮೂಲಕ ಬೆಲೆ ಏರಿಕೆ ಖಂಡಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಅವರು ತಿಳಿಸಿದರು. ನಮ್ಮ ಮಿತ್ರ ಪಕ್ಷವಾದ ಬಿಜೆಪಿಯು ಅವರದ್ದೇ ಅದ ಬೆಲೆ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದರು.
ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಆರಂಭ
ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ, ಬೆಂಗಳೂರು ಸೌತ್ ಪ್ರೈಡ್, ಬೆಂಗಳೂರು ಕೊರವಂಗಳ, ಬೆಂಗಳೂರು ಲೇಕ್‌ಸೈಡ್, ಇನ್ನರ್ ವೀಲ್ ಕ್ಲಬ್, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಇವರ ವತಿಯಿಂದ ಇಂದಿನಿಂದ ಏ.11 ರ ವರೆಗೆ ನಡೆಯಲಿರುವ ಉಚಿತ ಕೈಕಾಲು ಜೋಡಣಾ ಶಿಬಿರವನ್ನು ರೋಟರಿ ಸದಸ್ಯರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ
ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹೇಳಿದರು. ನಗರದ ವಿವೇಕಾನಂದ ಬಿ.ಇಡಿ ಕಾಲೇಜು, ಬಾಣಾವರ ಹಾಗೂ ಅರಸೀಕೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚಿಗೆ ಭೇಟಿ, ನೀಡಿ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಲಾ, ಕಾಲೇಜುಗಳ ಮೂಲ ಸೌಕರ್ಯ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ವಾರ್ಷಿಕ ಎರಡು ಕೋಟಿ ರು.ಅನುದಾನ ನೀಡುತ್ತಿದೆ ಎಂದರು.
ನಾವು ಮಾಡುವ ಹುದ್ದೆಗೆ ನ್ಯಾಯ ಒದಗಿಸಬೇಕು
ಕೆಲಸ ಮಾಡುವ ಹುದ್ದೆಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದರೆ ಹೆಸರು ತನ್ನಷ್ಟಕ್ಕೆ ತಾನೇ ಬರುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಗೋವಿಂದರಾಜು ತಿಳಿಸಿದರು. ಈ ಭಾಗಕ್ಕೆ ಪ್ರೌಢಶಾಲೆ ತರಲು ಈ ಭಾಗದ ಗ್ರಾಮಸ್ಥರು ಹೋರಾಟ ನಡೆಸಿ ಪ್ರಾರಂಭಿಸಿದ್ದರು. ಈ ಶಾಲೆಗೆ ಗಣಿತ ಶಿಕ್ಷಕರಾಗಿ ಬಂದ ಮಾರ್ಗನಳ್ಳಿ ಗ್ರಾಮದ ಎಂ.ಆರ್‌. ಅಶೋಕ್ ಬಂದ ಮೇಲೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಜೊತೆಗೆ ಸಂಸ್ಕೃತಿ ಸಂಪ್ರದಾಯ ಧರ್ಮದ ಬಗ್ಗೆ ಮನವರಿಕೆ ಮಾಡುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಸುಂದರ ಜೀವನ ಕಟ್ಟಿಕೊಳ್ಳಲು 34 ವರ್ಷದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ಆದಿಲಕ್ಷ್ಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ
ಸುಕ್ಷೇತ್ರ ಆದಿಹಳ್ಳಿ ಆದಿಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಆದಿಚುಂಚನಗಿರಿ ಮಠದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆದಿಲಕ್ಷ್ಮಿ ಅಮ್ಮನವರ ದೇವಾಲಯ ಮತ್ತು ಹೆಬ್ಬಾಗಿಲು ಮಂಟಪದ ಲೋಕಾರ್ಪಣೆಯು ಏಪ್ರಿಲ್ 11, 12 ಮತ್ತು 13ರಂದು ಶ್ರೀ ಮಠದ ಸಂಪ್ರದಾಯದಂತೆ ನಡೆಯಲಿದೆ ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.
  • < previous
  • 1
  • ...
  • 117
  • 118
  • 119
  • 120
  • 121
  • 122
  • 123
  • 124
  • 125
  • ...
  • 508
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved