ನಾಟಕವನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಿನಾಟಕ ನೋಡುವ ಅಭಿರುಚಿ ಇರಬೇಕು. ಆದರೆ ಪ್ರಸ್ತುತದಲ್ಲಿ ಎಷ್ಟೇ ಟಿ,ವಿ ಚಾನೆಲ್‌ಗಳು, ಧಾರವಾಹಿಗಳು ಇದ್ದರೂ ಸಹ ಜನರಿಗೆ ನಾಟಕಗಳಿಂದ ಸಿಗುವ ಮನರಂಜನೆ, ಧಾರ್ಮಿಕ ಭಾವನೆ, ಸಾಂಸ್ಕೃತಿಕ, ಸಾಮಾಜಿಕ, ಚಿಂತನೆ ಮುಂತಾದ ಅನೇಕ ವಿಷಯಗಳ ಬಗ್ಗೆ ತಿಳಿಯಲು ಸಹಾಯಕಾರಿಯಾಗಿದೆ ಎಂದು ಹಾಸನ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ತಿಳಿಸಿದರು. , ಹಿಂದಿನಿಂದ ನಾಟಕೋತ್ಸವ ಪ್ರದರ್ಶನವನ್ನು ತರಳಬಾಳು ಮಠದ ಸಾಣೇಹಳ್ಳಿ ಮಠದ ಶ್ರೀ ಶಿವಕುಮಾರ ಕಲಾ ತಂಡದವರು ಅತ್ಯುತ್ತಮ ಪ್ರದರ್ಶನವನ್ನು ನುರಿತ ಕಲಾವಿದರು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.