ರಾಮನಾಥಪುರ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯ ಮರೀಚಿಕೆಅರಕಲಗೂಡು ತಾಲೂಕಿನ ಅವಳಿ ಪಟ್ಟಣಗಳಾದ ಕೊಣನೂರು ಮತ್ತು ರಾಮನಾಥಪುರದಲ್ಲಿ ಸುಸಜ್ಜಿತವಾದ ಸಾರಿಗೆ ಬಸ್ ನಿಲ್ದಾಣದ ಕಟ್ಟಡಗಳಿದ್ದರೂ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಬಸ್ ನಿಲ್ದಾಣದಿಂದ 300 ಮೀಟರ್ ದೂರದಲ್ಲಿ ಬಸ್ ಘಟಕ ಇದೆ. ಜಾಗದ ಕೊರತೆಯಿಂದ ಇರುವ ಜಾಗವನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಕೂಡ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಕ್ಷಣಾ ವ್ಯವಸ್ಥೆ, ಸಿಸಿ ಕ್ಯಾಮೆರಾ, ಕಾಂಪೌಂಡ್, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ನಿಲ್ದಾಣ ಸುತ್ತಾ ಕಾಂಪೌಂಡ್ ನಿರ್ಮಿಸಿಲ್ಲ. ಇಲ್ಲಿಯೂ ಕೂಡ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಇಲ್ಲ.