ಸರಿಯಾಗಿ ಪಡಿತರ ವಿತರಣೆ ಮಾಡದಿದ್ದರೆ ಕ್ರಮನ್ಯಾಯಬೆಲೆ ಅಂಗಡಿ, ಸಕಲೇಶಪುರ, ಪಡಿತರ, Fair Price Shop, Sakaleshpur, Rationನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡದಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್ ಕೃಷ್ಣ ಹೇಳಿದರು. ಮಕ್ಕಳಿಗೆ ಮೊಟ್ಟೆ ವಿತರಣೆ ದಾಖಲಾತಿ ಸಂಗ್ರಹಿಸದ ಹಾಗೂ ದಾಸ್ತಾನು ಕುರಿತು ಮಾಹಿತಿ ನೀಡದ ಸಕಲೇಶಪುರ ತಾಲೂಕು ಆನೆಮಹಲ್‌ನ ಅಂಗನವಾಡಿ ಕಾರ್ಯಕರ್ತೆ ಎಂ.ವಿ.ರೇಷ್ಮಾ ಅವರನ್ನು ಗೌರವಧನ ಸೇವೆಯಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದರು.