ಸಂಗೀತ ಮತ್ತು ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಿಸಂಗೀತ ಮತ್ತು ಸಾಹಿತ್ಯದ ಕಡೆ ಸ್ವಲ್ಪವಾದರೂ ಆಸಕ್ತಿ ಮತ್ತು ಪರಿಜ್ಞಾನ ಇಲ್ಲ ಎಂದರೆ ನಾವು ಪ್ರಾಣಿಗಳು ಹಾಗೂ ಪಕ್ಷಿಗಳು ಎಂದು ಹೇಳಿ ಬಿಡುತ್ತಾರೆ. ಹಾಗಾಗಿ ಅವುಗಳ ಬಗ್ಗೆ ಸ್ವಲ್ಪವಾದರೂ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಸಂಸ್ಕೃತ ಭವನದ ಕಾರ್ಯದರ್ಶಿ ಪರಮೇಶ್ವರ ವಿ. ಭಟ್ ತಿಳಿಸಿದರು. ಮನುಷ್ಯ ಜನ್ಮದಲ್ಲಿ ನಮಗೆ ಸಾಹಿತ್ಯ, ಸಂಗೀತ ಇವುಗಳ ಬಗ್ಗೆ ಸಲ್ಪ ಆಸಕ್ತಿ ಇಲ್ಲ, ಪರಿಜ್ಞಾನ ಇಲ್ಲ ಎಂದರೇ ನಾವು ಸಾಕ್ಷತ್ ಪಶುಗಳು ಎಂದು ಹೇಳಿ ಬಿಡುತ್ತಾರೆ. ಸಾಹಿತ್ಯದಲ್ಲಿ, ಸಂಗೀತದಲ್ಲಿ ಸ್ವಲ್ಪವಾದರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.