ರೈತರಿಗೆ ಪರಿಹಾರ ನೀಡದೇ ಕಾಂಪೌಂಡ್ ನಿರ್ಮಾಣಕ್ಕೆ ಯತ್ನ:ಕೆರಳಿದ ರೈತರಿಂದ ಅಧಿಕಾರಿಗಳಿಗೆ ತರಾಟೆಕಾಮಗಾರಿ ಆರಂಭಿಸುವ ಮೊದಲೇ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಕೆಐಎಡಿಬಿ ಅಧಿಕಾರಿಗಳು ಕರೆಸಿಕೊಂಡಿದ್ದರು. ರೈತರು ವಿಮಾನ ನಿಲ್ದಾಣ ಕಾಮಗಾರಿಯ ಸದುದ್ದೇಶಕ್ಕಾಗಿ ಜಾಗ ನೀಡಿದ್ದೇವೆ. ನಮಗೂ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕೆಂಬ ಆಶಯ ಇದೆ, ಆದರೆ ಪೊಲೀಸರನ್ನು ಮುಂದಿಟ್ಟುಕೊಂಡು ರೈತರಿಗೆ ಪರಿಹಾರ ನೀಡದೇ ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದು ರೈತ ಸಮೂಹದ ಮೇಲೆ ಸರ್ಕಾರಗಳು, ನಮ್ಮ ಜನಪ್ರತಿನಿಧಿಗಳು ಇಟ್ಟಿರುವ ಗೌರವಕ್ಕೆ ಹಿಡಿದ ಕೈ ಗನ್ನಡಿ ಎಂದು ರೈತರು ಆಕ್ರೋಶ ಹೊರ ಹಾಕಿದರು.