ವಿಷ್ಣುಸಮುದ್ರದ ಕಲ್ಯಾಣಿ ಸ್ವಚ್ಛಗೊಳಿಸಲು ಒತ್ತಾಯವಿಷ್ಣುಸಮುದ್ರ ಬಳಿ ಇರುವ ಕಲ್ಯಾಣಿ ನೀರು ಮಲಿನವಾಗಿದ್ದು, ಕೂಡಲೇ ಸ್ವಚ್ಛ ಮಾಡುವಂತೆ ಅಂದಲೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಹಾಗೂ ಸಮಾಜಸೇವಕ ಆರ್.ಆರ್.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. ಚೆನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನರು ಕೂಡ ಇಲ್ಲಿ ಸ್ನಾನ ಮಾಡಲು ಬರುತ್ತಾರೆ. ಆದ್ದರಿಂದ ದೇಗುಲದ ಸಮಿತಿಯವರಾಗಲಿ, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಮತ್ತು ದೇವಸ್ಥಾನ ಧರ್ಮದರ್ಶಿಗಳು ಹಾಗೂ ಅರ್ಚಕರು ಗಮನಕ್ಕೆ ತೆಗೆದುಕೊಂಡು ಪೂಜೆ ಸಲ್ಲಿಸಿ ಶುದ್ಧೀಕರಣ ಕಾರ್ಯವನ್ನು ಆದಷ್ಟು ಬೇಗ ಮಾಡಲಿ ಎಂದು ಮನವಿ ಮಾಡಿದರು.