ಆದರವಳ್ಳಿ ಶಾಲೆಯ ಮೂವರು ಬಾಲಕರು ನಾಪತ್ತೆಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ತಾಲೂಕಿನ, ಕುನಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರತ್ (16), ಧನಂಜಯ್ (16), ಮುರುಳಿ (16) ಕಾಣಿಯಾಗಿರುವ ವಿದ್ಯಾರ್ಥಿಗಳು. ಕಾಣೆಯಾಗಿರುವ ಮೂವರು ಬಾಲಕರು ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬುವವರ ಮಕ್ಕಳಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆಗೆ ಮುಂದಾಗಿರುವ ಪೊಲೀಸರಿಗೆ ಬಾಲಕರು ಮೈಸೂರಿನತ್ತ ತೆರಳಿರುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಪೊಲೀಸರು ಮೈಸೂರಿಗೆ ತೆರಳಿದ್ದಾರೆ.