ಅವಕಾಶ ಬಳಸಿಕೊಂಡು ಸಾಧನೆ ಮಾಡಿವಿದ್ಯಾವಂತರು, ಶಿಕ್ಷಿತರ ಮಧ್ಯೆ ಇರುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಅವಕಾಶ ಇದೆ ಎಂದು ಶಿಕ್ಷಣ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು. ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜನಮಿತ್ರ ಆಯೋಜಿಸಿರುವ ಎರಡು ದಿನಗಳ ಎಕ್ಸ್‌ಪೋಗೆ ಶನಿವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು. ನಾನು ಯಾವುದೇ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ನನಗೆ ಅಕ್ಷರಜ್ಞಾನ ಇಲ್ಲ, ೧೯೭೨ರ ದಶಕದಿಂದಲೂ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಕಿತ್ತಲೆಹಣ್ಣು ಮಾರುತ್ತಿರುವ ನನಗೆ ಅದೊಂದು ದಿನ ಇಂಗ್ಲಿಷ್ ಗೊತ್ತಿಲ್ಲದೆ ಆದ ಮುಜುಗರದಿಂದ ಶಾಲೆ ತೆರೆದು ನನ್ನೂರಿನ ಮಕ್ಕಳಿಗೆ ಅಕ್ಷರ ಕಲಿಸಬೇಕೆಂಬ ಸಂಕಲ್ಪ ಮಾಡಿದೆ ಎಂದರು.