ಕಾಡುಗಳ ನಾಶದಿಂದಲೇ ಪ್ರಕೃತಿ ವಿಕೋಪಮಾನವನ ದುರಾಸೆಯಿಂದ ಅರಣ್ಯ ಕ್ಷೀಣಿಸುತ್ತಿದೆ. ಕಾಡುಗಳ ನಾಶದಿಂದಲೇ ಭೂಕಂಪ, ಸುನಾಮಿ, ವೈರಸ್ ಮಹಾಮಾರಿಗಳಂತಹ ವಿಕೋಪಗಳಾಗುತ್ತಿರುವುದು ಎಂದು ಭೈರಾಪುರ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯಪಟ್ಟರು. ಈ ಹಸಿರನ್ನು ವೃದ್ಧಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯೀಕರಣದ ಬಗ್ಗೆ ಗಮನಹರಿಸಬೇಕಿದೆ. ಮನೆಗೊಂದು ಮರ ಊರಿಗೊಂದು ವನದಂತೆ ಪ್ರತಿ ಪ್ರಜೆಯೂ ಹಸಿರನ್ನು ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಮಹತ್ವ ನೀಡಬೇಕಿದೆ ಎಂದರು.