ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದರೆ ಕ್ರಮಜಿಲ್ಲೆ ವ್ಯಾಪ್ತಿಯ ಕೆಲವು ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಕೆಲವೊಮ್ಮೆ ಅಗತ್ಯ ಚಿಕಿತ್ಸೆಗೆಂದು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಾಹನದಲ್ಲಿ ಕಳುಹಿಸುವಾಗ ಹಾಸನದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ತಿಳಿಸುತ್ತಾರಂತೆ. ಇದನ್ನ ತಡೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಬಡ ಕೂಲಿ ಕಾರ್ಮಿಕರು, ಹಣ ನೀಡದಿದ್ದರೆ ಹೊಟ್ಟೆಗೆ ಏನು ತಿಂತ್ತಾರೆ, ಅವರಿಗೆ ಮೊದಲು ಸಂಬಳ ಕೊಡುವ ವ್ಯವಸ್ಥೆ ಮಾಡಿ ಎಂದಿದ್ದೇನೆ ಎಂದರು.