ಮಕ್ಕಳಿಗೆ ತಾಯಂದಿರು ಮನೆಯಲ್ಲೇ ಸಂಸ್ಕಾರ ಕೊಡಿಯುಗವನ್ನೇ ಸೃಷ್ಠಿ ಮಾಡುವ ಶಕ್ತಿ ತಾಯಂದಿರಿಗೆ ಇದೆ. ಭವಿಷ್ಯದ ಮುಂದುವರಿದ ಭಾಗವಾಗಿರುವ ಮಕ್ಕಳಿಗೆ ಮನೆಯಲ್ಲಿಯೇ ತಾಯಂದಿರು ಉತ್ತಮ ಸಂಸ್ಕಾರ ನೀಡಿದ್ದೇ ಆದಲ್ಲಿ ಶಾಲಾ ಕಾಲೇಜುಗಳ ಭಾರ ಕಡಿಮೆಯಾಗುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು. ಲಕ್ಷಾಂತರ ಮಂದಿಯ ಅಂತಃರಂಗದ ಕರೆ, ಮೊರೆ, ಪ್ರಾರ್ಥನೆ ಚುಂಚನಗಿರಿ ಮಠವನ್ನ ಬೆಳೆಸುತ್ತಿದೆ, ಇನ್ನಷ್ಟು ಬೆಳೆಸುತ್ತದೆ. ಬೆಳೆಯುವಿಕೆ ಸಂದರ್ಭದಲ್ಲಿ ಎಲ್ಲರೂ ಜತೆಯಲ್ಲಿ ನಿಂತ್ತು ಮಠ, ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಸದಾ ಸ್ಪಂದಿಸಬೇಕಿದೆ ಎಂದರು.