ಮಕ್ಕಳಲ್ಲೂ ಬಿಪಿ ಶುಗರ್ ಆತಂಕಕಾರಿ ಬೆಳವಣಿಗೆಚಿಕ್ಕ ಮಕ್ಕಳಿಗೂ ಮಧುಮೇಹ, ರಕ್ತದೊತ್ತಡಂತಹ ಕಾಯಿಲೆ ಬರುತ್ತಿರುವುದು ಆತಂಕಕಾರಿ ವಿಷಯ ಎಂದು ಡಾ. ಚಂದ್ರಮೌಳಿ ಬೇಸರ ವ್ಯಕ್ತಪಡಿಸಿದರು. ಮಧುಮೇಹ ಹೆಚ್ಚಾದಂತೆ ಕಣ್ಣಿನ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ನಾವು ಇವುಗಳನ್ನು ಪ್ರಾರಂಭದ ಹಂತದಲ್ಲಿ ಸರಿಯಾದ ಚಿಕಿತ್ಸೆ ಮೂಲಕ ತೋರಿಸಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಲಯನ್ಸ್ ಸೇವಾಸಂಸ್ಥೆ ವತಿಯಿಂದ ಹಲವಾರು ಉಪಯೋಗ ಶಿಬಿರಗಳನ್ನು ಮಾಡುತ್ತಿದ್ದು, ಶಿಬಿರಗಳಲ್ಲಿ ಅತಿ ಹೆಚ್ಚು ಜನರು ಪಾಲ್ಗೊಂಡು ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.