ಬಸವಾಪಟ್ಟಣ ಲಕ್ಷ್ಮೀ ಕಾಂತಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನಬಸವಾಪಟ್ಟಣ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ಕಾಂತಸ್ವಾಮಿ ಬ್ರಹ್ಮರಥೋತ್ಸವ ದೇವಸ್ಥಾನದಲ್ಲಿ ಮಂಗಳವಾರ ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ, ವಾಹನ ಸ್ಥಳ ವಾಹನಹೋತ್ಸವ, ನಾದಸ್ವರ ಇನ್ನು ಹಲವಾರು ರೀತಿಯ ವಿವಿಧ ಉತ್ಸವಗಳು ಹಾಗೂ ವಿವಿಧ ಪೂಜಾ ಕೈಂಕರ್ಯದ ನಂತರ ಮಹಾರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಸಮಾಜದವರು ಭಕ್ತರುಗಳಿಗೆ ದಾಸೋಹ, ಮಜ್ಜಿಗೆ, ಪಾನಕ ಮುಂತಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.