ವ್ಯಸನ ಮುಕ್ತ ಬದುಕಿನಿಂದ ನೆಮ್ಮದಿ ಸಾಧ್ಯತಂಬಾಕು ಹಾಗೂ ಇತರೆ ಮಾದಕ ವಸ್ತುಗಳು ಆರೋಗ್ಯಕ್ಕೆ ಮಾರಕವಾದವು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್ ತಿಳಿಸಿದರು. ಹಲವರು ಅತಿಯಾದ ಮೊಬೈಲ್ ಬಳಕೆ, ಪಾನ್ ಬೀಡಾಗಳು, ನಶೆ ಬರಿಸುವ ಮಾದಕ ವಸ್ತುಗಳನ್ನು ಬಳಸುತ್ತಿದ್ದು, ಅದರ ಚಟಕ್ಕೆ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶೆ ಭರಿಸುವ ವಸ್ತುಗಳು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದರು.