ಪತ್ರಕರ್ತರ ಸಂಘದಿಂದ ಯಶಸ್ವಿ ಆರೋಗ್ಯ ಶಿಬಿರಹದಗೆಟ್ಟ ಆಹಾರ ಪದ್ಧತಿಯ ಈ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಅವಶ್ಯಕ. ಈ ನಿಟ್ಟಿನಲ್ಲಿ ಪತ್ರಕರ್ತರು ಹಾಗೂ ಕುಟುಂಭವರ್ಗಕ್ಕೆ ಆಯೋಜಿಸಿರುವ ಬೃಹತ್ ಆರೋಗ್ಯ ಶಿಬಿರ ಅರ್ಥಪೂರ್ಣವಾಗಿ ಜರುಗಿದೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. ೧೨ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ, ೨೦ ಮಂದಿ ರಕ್ತದಾನ, ಪಬ್ಲಿಕ್ ಎಕ್ಸ್‌ಪ್ರೆಸ್ ದೃಶ್ಯ ಮಾಧ್ಯಮದ ವರದಿಗಾರ ನಾಗರಾಜ್, ಸುನಿತಾ, ಲೋಕೇಶ್ ಸೇರಿದಂತೆ ಸುಮಾರು ೧೨ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು. ಸುಮಾರು ೨೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.