ಹಳೇಬೀಡಿನ ಕರಿಯಮ್ಮ ದೇವಿಯ ಜೀರ್ಣೋದ್ಧಾರ ಕಾರ್ಯಜೀರ್ಣೋದ್ಧಾರಗೊಂಡು ಇದೀಗ ಉದ್ಘಾಟನೆಯಾಗುತ್ತಿರುವ ಕರಿಯಮ್ಮ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬೆಳಗ್ಗೆ ೬ ಗಂಟೆಯಿಂದ ಉಷಾಪೂಜೆ, ಮಹಾಗಣಪತಿ ಹೋಮ, ಸ್ಥಾನಶುದ್ದಿ, ಬಿಂಬಶುದ್ಧಿ ಕಲಶಪೂಜೆ, ಶ್ರೀಸೂಕ್ತ ಹೋಮ, ಅನುಜ್ಞಾನಕಲಶ ಪೂಜೆ, ಪ್ರಸಾದ ಹೋಮ, ಆಂಜನೇಯ ಹೋಮ, ರತ್ನಾನ್ಯಾಸ, ಪೀಠಾಧಿಗಳ ಪ್ರತಿಷ್ಠೆ, ಕಾರ್ಯಕ್ರಮದೊಂದಿಗೆ ಅಷ್ಟಬಂಧನ ಪೂಜೆ ದುರ್ಗ ಹೋಮ ನಡೆಸಲಾಯಿತು ಎಂದು ಕೇಶವಭಟ್ಟರು ತಿಳಿಸಿದರು. ನವಗ್ರಹ ಪೂಜೆ, ಅಂಕುರ ಪೂಜೆ, ಶಾಂತಿ ಪ್ರಾಯಶ್ಚಿತ, ಬಿಂಬಶುದ್ಧಿ, ಹೋಮ ಹವನ, ಜೀವಕಲಶ ಸಪ್ತದಿವಾಸಾಂಗ, ಗಂಗೆಪೂಜೆ, ದುರ್ಗಪೂಜೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು.