ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸುಮ್ಮನಿರಲ್ಲ: ರೇವಣ್ಣದೇವೇಗೌಡರು, ರೇವಣ್ಣ ಅವರದ್ದು ಮುಗಿದೆ ಹೋಯಿತು ಅಂತ ತಿಳ್ಕೊಂಡಿದ್ದರೆ ಅದು ಕನಸು. ಯಾರಿಗೂ ಹೆದರಬೇಕಿಲ್ಲ ಧೈರ್ಯವಾಗಿರಿ, ಇಲ್ಲಿ ನ್ಯಾಯವಾಗಿ ಇರಬೇಕು. ಓಟು ಯಾರಿಗಾದರೂ ಹಾಕಿಕೊಳ್ಳಿ ನನಗೆ ಸಂಬಂಧವಿಲ್ಲ. ಊರು ನೆಮ್ಮದಿಯಾಗಿರಬೇಕು ಅಷ್. ಯಾರಾದರೂ ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರೆ ಬೇರೆ ತರ ಆಗುತ್ತೆ ಎಂದು ಸಂಸದರ ಹೆಸರೇಳದೇ ಪರೋಕ್ಷವಾಗಿ ಶಾಸಕ ಎಚ್.ಡಿ.ರೇವಣ್ಣ ಗುಡುಗಿದರು.