ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಕುಟುಂಬಕ್ಕೆ ವಿಷ ಕೊಟ್ಟ ಸೊಸೆಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮತ್ತು ಆತನ ಕುಟುಂಬವನ್ನ ಮುಗಿಸಲು ಪತ್ನಿಯೊಬ್ಬಳು ಖತರ್ನಾಕ್ ಪ್ಲಾನ್ ರೂಪಿಸಿದ್ದು, ಇಡೀ ಕುಟುಂಬಕ್ಕೆ ವಿಷದ ಮಾತ್ರೆ ಹಾಕಿ, ಇದೀಗ ಸಿಕ್ಕಿಬಿದ್ದಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು. ತನಿಖೆ ವೇಳೆ ಊಟಕ್ಕೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಯೋಚಿಸಿದ್ದ ಚೈತ್ರ ತನ್ನ ಕುಟುಂಬದವರನ್ನು ಕೊನೆಗಾಣಿಸಲು ಪ್ಲಾನ್ ರೂಪಿಸಿದ್ದಳು. ಪತಿ ಗಜೇಂದ್ರ, ಅತ್ತೆ-ಮಾವ ಅಷ್ಟೇ ಅಲ್ಲದೇ ಇಬ್ಬರು ಹೆತ್ತ ಮಕ್ಕಳಿಗೆ ಆಹಾರದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಿಧಾನವಾಗಿ ವಿಷ ದೇಹ ಪ್ರವೇಶಿಸುವ ಯೋಜನೆ ರೂಪಿಸಿದ್ದಳು.