ಬೇಲೂರಲ್ಲಿ ಅತ್ಯಾಚಾರದ ಅಪರಾಧಿ ಪ್ರಜ್ವಲ್ ಹುಟ್ಟುಹಬ್ಬ ಆಚರಣೆಪ್ರಜ್ವಲ್ ರೇವಣ್ಣ ಅವರ 35ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ರೋಗಿಗಳಿಗೆ ಹಣ್ಣು ಬ್ರೆಡ್ ನೀಡಿ ಮಾತನಾಡಿ, ಅಲ್ಪ ಅವಧಿಯಲ್ಲೇ ರಾಜ್ಯ ನಾಯಕರಾಗಿ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ರಸ್ತೆ, ಸಮುದಾಯ ಭವನ, ಸಹಕಾರ ಬ್ಯಾಂಕ್ ಕಟ್ಟಡ, ಇನ್ನೂ ಮುಂತಾದ ಕೆಲಸಗಳಿಗೆ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸುವಲ್ಲಿ ಶ್ರಮ ವಹಿಸಿದ್ದರು. ಮಾಜಿ ಪ್ರಾಧಾನಿ ಹಾಲಿ ರಾಜ್ಯಸಭಾ ಸದಸ್ಯರ ಅನುದಾದಲ್ಲಿ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಂದ ಅನುದಾನ ತಂದಿದ್ದರು ಎಂದರು.