ಸರ್ಕಾರದ ಮಂತ್ರಿಮಂಡಲ ಸಿದ್ದು ಬಣ ಡಿಕೆಶಿ ಬಣವಾಗಿ ಇಬ್ಭಾಗಸರ್ಕಾರದ ಮಂತ್ರಿಮಂಡಲದಲ್ಲಿರುವ ಸಚಿವರು ಎರಡು ಭಾಗವಾಗಿದ್ದಾರೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ, ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ ಸಿದ್ದರಾಮಯ್ಯ ಅವರ ಬಣ ಇನ್ನೊಂದು ದಾರಿ ಹಿಡಿಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು. ಸಿಎಂ ಬದಲಾವಣೆಯ ಕುರಿತು ಹೇಳಿಕೆ ನೀಡಿ, ನವೆಂಬರ್ ೧೫-೧೬ರೊಳಗೆ ಸಿಎಂ ಬದಲಾವಣೆಯಾಗಲಿದೆ. ಇಲ್ಲವಾದರೆ, ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ಮೂಡಲಿದೆ. ಈ ಕುರಿತು ನನಗೆ ಖಚಿತ ಮಾಹಿತಿ ಇದೆ ಎಂದು ಬಹಿರಂಗಪಡಿಸಿದರು ಎಂದರು.