ರಸ್ತೆಬದಿ ಕಸ ಸುರಿಯುವವರ ಮಾಹಿತಿ ಕೊಟ್ಟರೆ ಒಂದು ಸಾವಿರ ಬಹುಮಾನರಾತ್ರೋರಾತ್ರಿ ರಸ್ತೆಬದಿ ಚರಂಡಿ ಹಾಗೂ ನೀರಿಗೆ ಕಸ ಹಾಕುವವರನ್ನು ಗುರ್ತಿಸಿ ದಾಖಲೆ ನೀಡಿದರೆ ಒಂದು ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಘೋಷಣೆ ಮಾಡಿದ್ದಾರೆ. ಶ್ರವಣಬೆಳಗೊಳ ಐತಿಹಾಸಿಕ ಪ್ರದೇಶವಾಗಿದ್ದು, ಬೆಳಗೊಳಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಮೂಟೆ ಕಟ್ಟಿ ಎಸೆಯಲಾಗುತ್ತಿದೆ. ನೀರಿನ ಕೆನಾಲ್, ಏರಿ ಮೇಲೆ, ದೇವಾಲಯಗಳ ಬಳಿ, ಪ್ರಮುಖ ರಸ್ತೆಗಳಲ್ಲಿ, ವಿದ್ಯುತ್ ಕಂಬಗಳ ಬಳಿ ಕಸವನ್ನು ಎಸೆಯಲಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಈ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.