ರೈತರು ಕಾರ್ಮಿಕರ ತ್ಯಾಗ ಸ್ಮರಿಸಬೇಕಿದೆರೈತ ಹಾಗೂ ಕೂಲಿ ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರ ತ್ಯಾಗವನ್ನು ಗೌರವಿಸಬೇಕಿದೆ. ನಮ್ಮ ದೇಶದ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿಭಾಯಿಸುತ್ತಾ, ಯುವ ಜನತೆಯೂ ದೇಶದ ಏಳಿಗೆಗೆ ಶ್ರಮಿಸುವ ಜತೆಗೆ ನೀರು, ಪರಿಸರ ಹಾಗೂ ಭೂಮಿಯ ಸಂರಕ್ಷಣೆಗೆ ಆದ್ಯತೆ ನೀಡಿ, ಉತ್ತಮವಾದ ನಡೆ ರೂಪಿಸಿಕೊಂಡು ದೇಶದ ಯುವ ನಾಯಕರಾಗಿ ಬೆಳೆಯುವಂತೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಸಲಹೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಜನರ ತ್ಯಾಗ ಹಾಗೂ ಬಲಿದಾನದಿಂದ ದೊರೆತ ಸ್ವಾತಂತ್ರ್ಯ ದಿನದಂದು ವೀರ ಯೋಧರು ಹಾಗೂ ಮಹನೀಯರ ಸೇವೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.